6

ಖಾಕಿ ಕಂಡವರು ಕಕ್ಕಾಬಿಕ್ಕಿ: ಕೋಳಿ ಅಂಕಕ್ಕೆ ಬೆಳಕು ನೀಡಿದ ಬೀದಿ ದೀಪ!

ಕುಮಟಾದಲ್ಲಿ ಅನೇಕರು ಸೇರಿ ಕೋಳಿ ಅಂಕ ನಡೆಸುತ್ತಿರುವಾಗ ಪಿಎಸ್‌ಐ ರವಿ ಗುಡ್ಡಿ ದಾಳಿ ಮಾಡಿದ್ದಾರೆ. ಒಂದು ಕೋಳಿ ಜೊತೆ ನಾಲ್ವರು ಜೂಜುಕೋರರು ಸಿಕ್ಕಿ ಬಿದ್ದಿದ್ದಾರೆ.

ಕುಮಟಾ ಕಮಾನಿ ಗ್ರಾಮದ ಮುಸ್ಲೀಂಕೇರಿಗೆ ಹೋಗುವ ರಸ್ತೆ ಪಕ್ಕ 10ಕ್ಕೂ ಅಧಿಕ ಜನ ಸೇರಿ ಕೋಳಿ ಅಂಕ ಆಡಿಸುತ್ತಿದ್ದರು. ಏಪ್ರಿಲ್ 1ರ ರಾತ್ರಿ ಎರಡು ಹುಂಜಗಳ ಮೇಲೆ ಹಣ ಕಟ್ಟಿ ಅವುಗಳನ್ನು ಕಚ್ಚಾಟಕ್ಕೆ ಬಿಟ್ಟಿದ್ದರು.

ಬೀದಿ ದೀಪದ ಬೆಳಕಿನಲ್ಲಿ ನಡೆಯುವ ಆಟ ನೋಡಲು ಅನೇಕರು ಸೇರಿದ್ದರು. ಆದರೆ, ಪೊಲೀಸರನ್ನು ಕಂಡ ತಕ್ಷಣ ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಅದಾಗಿಯೂ, ಪೊಲೀಸರು ಹೊಟೇಲ್ ಕೆಲಸ ಮಾಡುವ ಮಾಸೂರಿನ ವಿಶ್ವನಾಥ ನಾಯ್ಕ, ಮೀನುಗಾರಿಕೆ ನಡೆಸುವ ಕಲಭಾವಿಯ ಆನಂದ ಅಂಬಿಗ, ಅಳ್ವೆಕೊಡಿಯ ರಿಕ್ಷಾ ಚಾಲಕ ಗಜಾನನ ಅಂಬಿಗ ಹಾಗೂ ಹಿರೆಗುತ್ತಿ ತಗತಗೇರಿಯಲ್ಲಿ ಕೂಲಿ ಕೆಲಸದ ಜೋಗೇಶ ಗುನಗಾ ಅವರನ್ನು ಹಿಡಿದರು.

ಅವರ ಬಳಿಯಿದ್ದ ಒಂದು ಹುಂಜವನ್ನು ವಶಕ್ಕೆ ಪಡೆದರು. 560ರೂ ಹಣದೊಂದಿಗೆ ಕತ್ತಿ, ಚೀಲವನ್ನು ಜಪ್ತು ಮಾಡಿದರು. ಗೋಕರ್ಣ ಎನ್ನೆಮುಡಿಯ ಪ್ರಜ್ವಲ ಹಳ್ಳೇರ, ಅದೇ ಊರಿನ ಯೋಗೇಶ ಹಳ್ಳರ್, ಕೋಡ್ಕಣಿಯ ಪ್ಲೋಟಿನಕೇರಿಯ ನಾಗರಾಜ ನಾಯ್ಕ, ಹಾಗೂ ದತ್ತಾತ್ರೇಯ ಅಂಬಿಗ ಸೇರಿ ಇನ್ನೂ ಕೆಲವರು ಓಡಿಹೋದ ಬಗ್ಗೆ ಪ್ರಕರಣ ದಾಖಲಿಸಿದರು.

  • Related Posts

    ಮಹಿಳೆಯ ಪಕ್ಕದಲ್ಲೇ ಮಲಗಿ ಕಳ್ಳತನಕ್ಕೆ ಯತ್ನಿಸಿದ ಖದೀಮ!

    Share this… Facebook Pinterest Twitter Linkedin Whatsappಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಧ್ಯರಾತ್ರಿ ಕಳ್ಳನ ಕಾಟ; ಮಹಿಳೆಯ ಹಾಸಿಗೆಯೊಳಗೆ ನುಸುಳಿದ ಖದೀಮ! ಹಾವೇರಿ: ನಗರದ ಜಿಲ್ಲಾಸ್ಪತ್ರೆಯ ವಾರ್ಡ್‌ನಲ್ಲಿ ಮಧ್ಯರಾತ್ರಿ ಕಳ್ಳನೊಬ್ಬ ವಿಚಿತ್ರ ರೀತಿಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಪಕ್ಕದಲ್ಲೇ…

    ಹಾವೇರಿ ಮಹಿಳಾ ಕಾಂಗ್ರೆಸ್‌ನಿಂದ ಇಂದಿರಾ ಗಾಂಧಿ ಜನ್ಮದಿನಾಚರಣೆ!

    Share this… Facebook Pinterest Twitter Linkedin Whatsappಹಾವೇರಿಯಲ್ಲಿ ಇಂದಿರಾ ಗಾಂಧಿ ಜನ್ಮದಿನಾಚರಣೆ: ಮಾಜಿ ಪ್ರಧಾನಿಯ ಕೊಡುಗೆ ಸ್ಮರಿಸಿದ ಮಹಿಳಾ ಕಾಂಗ್ರೆಸ್ ಮುಖಂಡರು ಹಾವೇರಿ: ಭಾರತದ ಮಾಜಿ ಪ್ರಧಾನಮಂತ್ರಿ ಹಾಗೂ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ದಿವಂಗತ ಇಂದಿರಾ ಗಾಂಧಿಯವರ ಜನ್ಮದಿನದ…

    You cannot copy content of this page