6

ಕರಡಿ ಜೊತೆ ಸೆಣೆಸಾಟ: ಆತನ ಜೀವ ಉಳಿದಿದ್ದೇ ದೊಡ್ಡ ಪವಾಡ!

ಮುಂಡಗೋಡದ ಸಿದ್ದು ಯಾಮಕರ ಎಂಬಾತರ ಮೇಲೆ ಕರಡಿ ದಾಳಿ ನಡೆಸಿದೆ. ಕರಡಿ ಜೊತೆ ಸೆಣಸಾಟ ನಡೆಸಿ ಜೀವ ಉಳಿಸಿಕೊಂಡ ಸಿದ್ದು ಅವರನ್ನು ಊರಿನವರು ಆಸ್ಪತ್ರೆಗೆ ದಾಖಲಿಸಿದರು.

ಮುಂಡಗೋಡದ ಜೋಗೇಶ್ವರ ಹಳ್ಳದ ಬಳಿ ಕರಡಿ ಸಂಚಾರ ಜೋರಾಗಿದೆ. ಗುರುವಾರ ಆ ಕಡೆ ನಡೆದುಹೋಗುತ್ತಿದ್ದ ಸಿದ್ದು ಯಾಮಕರ್ ಮೇಲೆ ಕರಡಿ ಆಕ್ರಮಣ ನಡೆಸಿದೆ. ಹೊಲಕ್ಕೆ ನೀರುಣಿಸುವುದಕ್ಕಾಗಿ ಸಿದ್ದು ಯಾಮಕರ್ ಹೊರಟಿದ್ದರು. ಬೋರ್‌ವೆಲ್ ಚಾಲು ಮಾಡುವ ವೇಳೆ ಕರಡಿ ದಾಳಿ ನಡೆಸಿತು.

ಕರಡಿ ಕಚ್ಚಿದಾಗ ಸಿದ್ದು ಯಾಮಕರ್ ಜೋರಾಗಿ ಕೂಗಿದರು. ಅವರ ಕೂಗು ಯಾರಿಗೂ ಕೇಳಲಿಲ್ಲ. ಹೀಗಾಗಿ ಕರಡಿ ಓಡಿಸಲು ಸಾಧ್ಯವಾಗಲಿಲ್ಲ. ಅದಾದ ನಂತರ ನಿರಂತರವಾಗಿ ಅವರು ಬೊಬ್ಬೆ ಹೊಡೆದಿದ್ದು, ಕರಡಿ ಜೊತೆ ಸೆಣೆಸಾಟ ನಡೆಸಿದರು. ಆಗ, ಊರಿನವರು ಅಲ್ಲಿಗೆ ಬಂದು ಸಿದ್ದು ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದರು.

ಅಸ್ವಸ್ಥಗೊಂಡಿದ್ದ ಸಿದ್ದು ಯಮಕರ್ ಅವರನ್ನು ಜನರು ಆಸ್ಪತ್ರೆಗೆ ದಾಖಲಿಸಿದರು. ಸಿದ್ದು ಯಾಮಕರ್ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page