6

ಯಲ್ಲಾಪುರ-ಶಿರಸಿ ರಸ್ತೆಯಲ್ಲಿ ಮುಂದುವರಿದ ಬಾಳೆ ತೋಟ ನಿರ್ಮಾಣ ಕಾರ್ಯ! ನಿನ್ನೆ ಚವತ್ತಿಯಲ್ಲಿ, ಇಂದು ಸವಣಗೇರಿಯಲ್ಲಿ

ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಬಾಳೆ ತೋಟ ನಿರ್ಮಾಣ ಕಾರ್ಯ ಮುಂದುವರಿದಿದೆ!

ನಿನ್ನೆ ಸಂಜೆ ವೇಳೆಗೆ ಚವತ್ತಿ ಬಳಿ ಸ್ಥಳೀಯರು ಯಾರೋ ರಸ್ತೆಯ ಹೊಂಡಗಳಲ್ಲಿ ಬಾಳೆ ಗಿಡ ನೆಟ್ಟಿದ್ದರು. ಶನಿವಾರ ಬೆಳಿಗ್ಗೆ ಶಿರಸಿ ರಸ್ತೆಯ ಸವಣಗೇರಿ ಬಳಿ ಬೆಳ್ಸೂರು ಕ್ರಾಸ್ ನಲ್ಲಿ ರಸ್ತೆಯ ಹೊಂಡದಲ್ಲಿ ಬಾಳೆ ಗಿಡ ಪ್ರತ್ಯಕ್ಷವಾಗಿದೆ.

ಇದೇ ಸ್ಥಳದಲ್ಲಿ ಕಳೆದ ವರ್ಷವೂ ಬಾಳೆಗಿಡ ನೆಟ್ಟು ರಸ್ತೆಯ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗಲೂ ರಸ್ತೆಯ ದುಃಸ್ಥಿತಿ ಹಾಗೇ ಇದ್ದು, ಈ ಬಾರಿಯೂ ಅದೇ ಹಾದಿ ಹಿಡಿದಿದ್ದಾರೆ.

ತಾಲೂಕಿನಲ್ಲಿ ಇದೇ ಸಂಪ್ರದಾಯ ಮುಂದುವರಿದರೆ ಬಹುತೇಕ ಎಲ್ಲಾ ರಸ್ತೆಗಳಲ್ಲೂ ಬಾಳೆ ತೋಟ ಸಿದ್ಧವಾದರೆ ಅಚ್ಚರಿಯಿಲ್ಲ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page