6

ಕಡಿಮೆ ದರದಲ್ಲಿ ಲ್ಯಾಪ್ ಟಾಪ್ ನೀಡುವುದಾಗಿ ಹೇಳಿ ಪಂಗನಾಮ

ಕಡಿಮೆ ಬೆಲೆಗೆ ಲ್ಯಾಪ್ ಟಾಪ್ ನೀಡುವುದಾಗಿ ಹೇಳಿ 3.75 ಲಕ್ಷ ರೂ ನಾಮ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಂಬಾರದ ಜಗದೀಶ ಖಾರ್ವಿ ಅವರು ಅಂಕೋಲಾದ ಕಾಂಗ್ರೆಸ್ ಕಚೇರಿಯಲ್ಲಿ ಇದ್ದಾಗ ಅಲ್ಲಿಗೆ ಬಂದ ವ್ಯಕ್ತಿ ತನ್ನನ್ನು ಯಶಸ್ ಬಿ.ಎಸ್ ಎಂದು ಪರಿಚಯಿಸಿಕೊಂಡು, ತನ್ನದು ಬೆಂಗಳೂರಿನಲ್ಲಿ ಎನ್.ಜಿ ಒ ಇದೆ. ಅದರ ಮೂಲಕ ಒಳ್ಳೆಯ ಕಂಪನಿಯ ಲ್ಯಾಪ್ ಟಾಪ್ ಗಳನ್ನು ಕಡಿಮೆ ದರದಲ್ಲಿ ನೀಡುವುದಾಗಿ ಹೇಳಿದ್ದಾನೆ.

ಇದನ್ನು ನಂಬಿದ ಜಗದೀಶ ಅವರು, ಡೆಲ್ ಕಂಪನಿಯ 15 ಲ್ಯಾಪ್ ಟಾಪ್ ಆರ್ಡರ್ ಮಾಡಿ, ತನ್ನ ಖಾತೆಯಿಂದ 3.75 ಲಕ್ಷ ರೂ ಆರ್.ಟಿ.ಜಿ.ಎಸ್ ಮಾಡಿದ್ದಾರೆ.‌ ಹಣ ಪಡೆದ ವ್ಯಕ್ತಿ ಲ್ಯಾಪ್‌ಟಾಪನ್ನೂ ನೀಡದೇ, ಹಣವನ್ನೂ ವಾಪಸ್ ಮಾಡದೇ ಮೋಸ ಮಾಡಿದ್ದಾನೆಂದು ಜಗದೀಶ ಖಾರ್ವಿ ದೂರಿದ್ದಾರೆ. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page