6

ಕುಬೇರಪ್ಪ ಬಂಡಾಯಕ್ಕೆ ಬ್ರೇಕ್: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂ. ಕುಬೇರಪ್ಪ ಸಂಧಾನ ಯಶಸ್ವಿ: ಮೋಹನ್ ಲಿಂಬಿಕಾಯಿ ಪರ ಪ್ರಚಾರಕ್ಕೆ ನಿರ್ಧಾರ

ಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಂ. ಕುಬೇರಪ್ಪ ಅವರು ಇದೀಗ ಪಕ್ಷದ ನಾಯಕರೊಂದಿಗೆ ಸಂಧಾನ ಮಾಡಿಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರನ್ನು ಬೆಂಬಲಿಸಿ ಪ್ರಚಾರ ನಡೆಸಲು ನಿರ್ಧರಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಎಂ. ಕುಬೇರಪ್ಪ ಅವರು, ಪಕ್ಷದ ಟಿಕೆಟ್ ಕೈತಪ್ಪಿದ್ದರಿಂದ ತಮಗೆ ತೀವ್ರ ನೋವಾಗಿತ್ತು. ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದೆ. ಪದವೀಧರ ಘಟಕಕ್ಕಾಗಿ ಐದು ವರ್ಷಗಳ ಕಾಲ ಶ್ರಮಿಸಿದ್ದರೂ ಟಿಕೆಟ್ ದೊರೆಯದಿರುವುದು ಬೇಸರ ಮೂಡಿಸಿತ್ತು ಎಂದು ತಿಳಿಸಿದರು.

ಪಕ್ಷ ಮತ್ತು ತಮ್ಮ ನಡುವೆ ರಾಜಕೀಯ ಸಂಘರ್ಷ ಉಂಟಾಗಿತ್ತು. ಈ ಹಿಂದೆ ಶಿವಾನಂದ ಪಾಟೀಲ್ ಅವರು ಮನೆಗೆ ಬಂದು ಸಮಾಧಾನಪಡಿಸಿದ್ದರು. ಆದರೆ, ಆಗಿನ ಸಚಿವರು ನೀಡಿದ್ದ ಭರವಸೆಯಂತೆ ನಡೆದುಕೊಳ್ಳಲಿಲ್ಲ. ಐದರಿಂದ ಆರು ತಿಂಗಳಾದರೂ ಪಕ್ಷದ ಯಾರೊಬ್ಬರೂ ಕರೆ ಮಾಡಿ ಮಾತನಾಡಿಸಿರಲಿಲ್ಲ. ಹೀಗಾಗಿ ಕೊನೆಯ ದಿನ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕಾಯಿತು ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರ ಭರವಸೆ ಬಳಿಕ ಸಂಧಾನ

ಬಂಡಾಯದ ಹಿನ್ನೆಲೆಯಲ್ಲಿ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ತಮ್ಮನ್ನು ಕರೆದು ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ನಿಗಮ ಮಂಡಳಿಯಲ್ಲಿ ಸ್ಥಾನಮಾನ ಕಲ್ಪಿಸುವ ಆಶ್ವಾಸನೆಯನ್ನೂ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಭರವಸೆಯೊಂದಿಗೆ ಸಂಧಾನ ಯಶಸ್ವಿಯಾಗಿದೆ ಎಂದು ಎಂ. ಕುಬೇರಪ್ಪ ಹೇಳಿದರು.

ಇನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರ ಪರವಾಗಿ ಪ್ರಚಾರ ನಡೆಸಿ, ಅವರನ್ನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದರು.

ಅಹಿಂದ ಸಂಘಟನೆ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಭಾಗವಾಗಿದೆ ಎಂದು ಹೇಳಿದ ಕುಬೇರಪ್ಪ, ಪಕ್ಷದ ನಾಯಕರೊಂದಿಗೆ ನಡೆದ ಮಾತುಕತೆ ಹಾಗೂ ಭರವಸೆಗಳ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ಈ ಬೆಳವಣಿಗೆಯಿಂದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಕಣದಲ್ಲಿ ಕಾಂಗ್ರೆಸ್‌ನ ಬಂಡಾಯದ ಬಿಕ್ಕಟ್ಟು ಶಮನಗೊಂಡಿದ್ದು, ಮೋಹನ್ ಲಿಂಬಿಕಾಯಿ ಅವರಿಗೆ ಬೆಂಬಲ ದೊರೆತಂತಾಗಿದೆ.

Related Posts

ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ

Share this… Facebook Pinterest Twitter Linkedin Whatsappದೆಹಲಿಯ ಕಬ್ಬು ಬೆಳೆಗಾರರ ಸಭೆಗೆ ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ ಹಾವೇರಿ: ಕಬ್ಬು ಬೆಳೆಗಾರರ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಅಕ್ಟೋಬರ್ 12ರಂದು ಸೋಮವಾರ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ…

ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ

Share this… Facebook Pinterest Twitter Linkedin Whatsappಹಾವೇರಿ: ಅಕ್ರಮ ಮರಳು ಸಂಗ್ರಹದ ವಿರುದ್ಧ ಕಂದಾಯ ಅಧಿಕಾರಿಗಳ ದಾಳಿ; 146 ಮೆಟ್ರಿಕ್ ಟನ್ ಮರಳು ಜಪ್ತಿ! ಹಾವೇರಿ: ಅಕ್ರಮವಾಗಿ ಮರಳು ಸಂಗ್ರಹಿಸಿರುವುದರ ವಿರುದ್ಧ ಕಾರ್ಯಾಚರಣೆ ನಡೆಸಿದ ಕಂದಾಯ ಅಧಿಕಾರಿಗಳು, ಹಾವೇರಿ ತಾಲೂಕಿನ…

You cannot copy content of this page