6

ಹಾವೇರಿಯಲ್ಲಿ ಸಿನಿಮಾ ಟಿಕೆಟ್‌ಗೆ ಜಡೆ ಜಗಳ!!

ಹಾವೇರಿಯಲ್ಲಿ ಸಿನಿಮಾ ಟಿಕೆಟ್‌ಗಾಗಿ ಮಹಿಳೆಯರ ಜಡೆಜಗಳ! ಮಾಂಗಲ್ಯ ಸರ ಕಿತ್ತುಕೊಂಡು ಹೊಡೆದಾಟ

ಹಾವೇರಿ: ಸಿನಿಮಾ ಟಿಕೆಟ್ ವಿಚಾರವಾಗಿ ಹಾವೇರಿಯ ಮಾಗಾವಿ ಚಿತ್ರಮಂದಿರದ ಮುಂದೆ ಮಹಿಳೆಯರ ನಡುವೆ ಜಗಳ ನಡೆದಿದ್ದು, ಪರಸ್ಪರ ಹಲ್ಲೆ ಮಾಡಿಕೊಂಡ ಘಟನೆ ನಡೆದಿದೆ.

‘ಪ್ರೇಮದ ಊರಲಿ’ ಸಿನಿಮಾ ವೀಕ್ಷಿಸಲು ಬಂದಿದ್ದ ಮಹಿಳೆಯರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದ್ದು, ಪರಸ್ಪರ ಮುಖ-ಮೈ ಪರಚಿಕೊಂಡು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮಹಿಳೆಯರು ಪರಸ್ಪರ ಮಾಂಗಲ್ಯ ಸರ ಕಿತ್ತುಕೊಂಡು ಜಗಳವಾಡಿದ್ದಾರೆ ಎನ್ನಲಾಗಿದೆ.

ಚಿತ್ರಮಂದಿರದ ಮುಂಭಾಗದಲ್ಲೇ ಮಹಿಳೆಯರ ಕಿತ್ತಾಟದಿಂದ ಕೆಲಕಾಲ ಹೈಡ್ರಾಮಾ ಸೃಷ್ಟಿಯಾಗಿದ್ದು, ಸುತ್ತಮುತ್ತಲಿದ್ದವರು ಘಟನೆ ವೀಕ್ಷಿಸಿದ್ದಾರೆ. ಕೊನೆಗೆ ಸಿನಿಮಾ ವೀಕ್ಷಿಸದೇ ಮಹಿಳೆಯರು ವಾಪಸ್ ಊರಿಗೆ ತೆರಳಿದ್ದಾರೆ ಎನ್ನಲಾಗಿದೆ.

ಸಿನಿಮಾ ನೋಡಲು ಬಂದವರು ಚಿತ್ರಮಂದಿರದ ಮುಂದೆಯೇ ಜಗಳವಾಡಿಕೊಂಡ ಘಟನೆ ಸ್ಥಳೀಯರ ಮೊಬೈಲ್ ಗಳಲ್ಲಿ ಸೆರೆಯಾಗಿದೆ

Related Posts

ಹಾವೇರಿ ಜಿಲ್ಲೆಯ ರೈತರಿಗೆ ಸಿಹಿಸುದ್ದಿ!

Share this… Facebook Pinterest Twitter Linkedin Whatsappಶ್ರೇಷ್ಠ ತೋಟಗಾರಿಕೆ ರೈತ – ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ ಹಾವೇರಿ: ಅ.22 : ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2026-27ನೇ ಸಾಲಿನ ‘ತೋಟಗಾರಿಕಾ ಮೇಳ’ವನ್ನು ಡಿಸೆಂಬರ್ 23 ರಿಂದ 25…

ಹಾವೇರಿ: ಸನ್ಮಾನಕ್ಕೆ ಸಾಧಕರಿಂದ ಅರ್ಜಿ ಆಹ್ವಾನ

Share this… Facebook Pinterest Twitter Linkedin Whatsappಹಾವೇರಿ: ಅ.22 : ಜಿಲ್ಲಾಡಳಿತದಿಂದ ನವೆಂಬರ್ 1 ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಪತ್ರಿಕೋದ್ಯಮ, ವಿಜ್ಞಾನ-ತಂತ್ರಜ್ಞಾನ, ಕೃಷಿ, ಪರಿಸರ, ಪೌರಕಾರ್ಮಿಕ,…

You cannot copy content of this page