6

ಕಳಚೆ ಭೂ ಕುಸಿತ: ಪರಿಶೀಲನೆ – ಸೂಚನೆಗೆ ಮಾತ್ರ ಅಧಿಕಾರ, ಪರಿಹಾರ – ಪುನರ್ವಸತಿ ನಕಾರ!

ಯಲ್ಲಾಪುರ: ಕಳಚೆ ಭೂ ಕುಸಿತ ವಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಪಾಯದಲ್ಲಿರುವ 23 ಮನೆಗಳಿಗೆ ಸ್ಥಳಾಂತರವಾಗುವoತೆ ನೋಟಿಸ್ ನೀಡಿದ್ದಾರೆ. ಆದರೆ, ಈವರೆಗೂ ಎಲ್ಲಿಯೂ ಪುನರ್ವಸತಿ ಕಲ್ಪಿಸಿಲ್ಲ!
2021ರಲ್ಲಿ ಕಳಚೆಯಲ್ಲಿ ಭೂ ಕುಸಿತ ಉಂಟಾದಾಗ ಮಹಿಳೆಯೊಬ್ಬರು ಸಾವನಪ್ಪಿದ್ದರು. ಅಪಾರ ಆಸ್ತಿ ಹಾನಿಯಾಗಿತ್ತು. ಆ ವೇಳೆ ಊರಿನ ಅನೇಕರು ಶಾಶ್ವತ ಪುನರ್ವಸತಿಗೆ ಆಗ್ರಹಿಸಿದ್ದರು. ಇದಕ್ಕಾಗಿ ಕೆಲವರು ಹೋರಾಟವನ್ನು ನಡೆಸಿದ್ದರು. ಆದರೆ, ಶಾಸಕರು `ಕಿವಿ ಊದುವವರ’ ಮಾತಿಗೆ ಮರುಳಾಗಿ ಇದನ್ನು ತಡೆ ಹಿಡಿದಿದ್ದರು. ಈ ಬಗ್ಗೆ ಪ್ರಶ್ನಿಸಿದಾಗಲೆಲ್ಲ `ತಾಂತ್ರಿಕ ಕಾರಣ’ ಎಂಬ ನೆಪ ಹೇಳುತ್ತಿದ್ದು, ಆ ಕಾರಣವನ್ನು ಸರಿಪಡಿಸುವ ಕೆಲಸ ಮಾಡಲಿಲ್ಲ. ಇದೀಗ ಮತ್ತೆ ಕಳಚೆಯಲ್ಲಿ ಭೂ ಕುಸಿತವಾಗಿದ್ದು, ಅಲ್ಲಿನವರು ಪುನರ್ವಸತಿ ಕಲ್ಪಿಸಿ ಎಂದು ಅಂಗಲಾಚುತ್ತಿದ್ದಾರೆ. ಆದರೆ, ಅವರ ಕೂಗು ಕೇಳಬೇಕಾದವರಿಗೆ ಕೇಳುತ್ತಿಲ್ಲ.
ಭೂ ಕುಸಿತದ ಸುದ್ದಿ ಕೇಳಿ ಸೋಮವಾರ ಸಹ ಅಧಿಕಾರಿಗಳು ಕಳಚೆಗೆ ಭೇಟಿ ನೀಡಿ ತೋಟಗಳನ್ನು ಪರಿಶೀಲಿಸಿದರು. ಅಪಾಯದಲ್ಲಿರುವ ಮನೆಗಳಿಗೆ ಮತ್ತೊಮ್ಮೆ ನೋಟಿಸ್ ನೀಡಿದರು. ಹಾಳಾದ ತೋಟಗಳನ್ನು ಪರಿಶೀಲಿಸಿ, 1 ಹೆಕ್ಟೇರ್ ಅಡಿಕೆ ತೋಟ ಹಾಳಾದರೆ 22 ಸಾವಿರ ಪರಿಹಾರ ಬರುವ ಬಗ್ಗೆ ತಿಳಿಸಿದರು. ಇಲ್ಲಿ 1 ಎಕರೆಯಷ್ಟು ತೋಟ ಹಾಳಾಗಿದ್ದು, ಅದಕ್ಕೆ ಬರುವ ಪರಿಹಾರ ಹಾಗೂ ಅದಕ್ಕಾಗಿ ಅರ್ಜಿ ಹಿಡಿದು ಓಡಾಡುವ ಖರ್ಚಿನ ಲೆಕ್ಕಾಚಾರದ ಬಗ್ಗೆ ಜನ ಅಳೆದು ತೂಗಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page