ಕುಮಟಾ: ಗೋಕರ್ಣದ ಕೋಟಿತೀರ್ಥದಲ್ಲಿ ಮುಳುಗಿದ್ದ ತೇಲುವ ಕಾರಂಜಿಯನ್ನು ಶನಿವಾರ ಹೊರ ತೆಗೆಯಲಾಗಿದೆ.
ದಾಂಡೇಲಿಯ ವೆಸ್ಟಕೋಸ್ಟ್ ಪೇಪರ್ ಮಿಲ್‌ನವರು ನೀರಿನ ಶುದ್ಧೀಕರಣಕ್ಕಾಗಿ ಈ ಕಾರಂಜಿ ನೀಡಿದ್ದರು. ಕಳೆದ ಬೇಸಿಗೆಯಲ್ಲಿ ಕಾರಂಜಿಯ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಅದಾದ ನಂತರ ಕೋಟಿತೀರ್ಥದಲ್ಲಿಯೇ ಇದ್ದ ಕಾರಂಜಿ ಮಳೆ ಪ್ರಭಾವದಿಂದ ನೀರಿನ ಆಳ ಸೇರಿತ್ತು.
ಇದೀಗ ಪೇಪರ್ ಮಿಲ್ ಸಿಬ್ಬಂದಿಯೇ ಆಗಮಿಸಿ ಮೀನುಗಾರರ ನೆರವಿನಿಂದ ಅದನ್ನು ಮೇಲೆತ್ತಿದ್ದಾರೆ. ತಿಂಗಳುಗಳ ಕಾಲ ನೀರಿನಲ್ಲಿ ಮುಳುಗಿದ್ದರೂ ಕಾರಂಜಿಗೆ ಯಾವುದೇ ಹಾನಿ ಆಗಿಲ್ಲ. ಮಳೆ ಮುಗಿದ ನಂತರ ಮತ್ತೆ ಇದನ್ನು ಅಳವಡಿಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ತೇಲುವ ಕಾರಂಜಿ ಮುಳುಗಿದ್ದ ಬಗ್ಗೆ ಜೂನ್ 30ರಂದು ಪ್ರಕಟವಾಗಿದ್ದ ವರದಿ ಇಲ್ಲಿ ಓದಿ..








