6

Illegal liquor | ಸರಾಯಿ ಕುಡಿಯಲು ಲೈಸನ್ಸ ಬೇಕಾ?!

ಅಗಸ್ಟ 18ರ ಸಂಜೆ 6.15ಕ್ಕೆ ಸರಾಯಿ ( Illegal liquor ) ಕುಡಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಣ ಈತ ಸರಾಯಿ ಕುಡಿಯಲು ಲೈಸನ್ಸ ಪಡೆದಿರಲಿಲ್ಲ!

ಹೊನ್ನಾವರದ ತಾಳಮಕ್ಕಿ ಬೋಳೆಬಸ್ತಿ ಅಣ್ಣಪ್ಪ ಚೋಳಪ್ಪ ನಾಯ್ಕ ಎಂಬಾತ ಅನಂತವಾಡಿಯ ಬಿಎಸ್‌ಎನ್‌ಎಲ್ ಟವರ್ ಬಳಿ ಸರಾಯಿ ( Illegal liquor ) ಕುಡಿಯುತ್ತಿದ್ದ. ಆಗ ದಾಳಿ ನಡೆಸಿದ ಪಿಎಸ್‌ಐ ಭರತಕುಮಾರ್ ಆತನನ್ನು ವಶಕ್ಕೆ ಪಡೆದರು.

ಮದ್ಯ ಸೇವನೆಗೆ ಮೀಸಲಿರುವ ಜಾಗದಲ್ಲಿ ಸರಾಯಿ ಕುಡಿದರೆ ಪೊಲೀಸರು ಈ ಕ್ರಮ ಜರುಗಿಸುತ್ತಿರಲಿಲ್ಲ. ಅಥವಾ ಆತ ತನ್ನ ಮನೆಯಲ್ಲಿ ಸರಾಯಿ ಕುಡಿಯುತ್ತಿದ್ದರೂ ಆತನ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಅವಕಾಶ ಇರಲಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಕುಡಿಯುವುದು ನಿಷೇಧ. ಹೀಗಿದ್ದರೂ ಆತನ ಬಿಎಸ್‌ಎನ್‌ಎಲ್ ಟವರ್ ಬಳಿ ನಿಯಮ ಮೀರಿ, ಅನಧಿಕೃತವಾಗಿ ಸರಾಯಿ ( Illegal liquor )ಕುಡಿಯುತ್ತಿದ್ದ ಕಾರಣ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕ ಅಬಕಾರಿ ಕಾಯ್ದೆ ಅಡಿ ಅಣ್ಣಪ್ಪ ಚೋಳಪ್ಪ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page