6

School | ಶಿಕ್ಷಕರ ಕಾಳಜಿಯಿಂದ ಉಳಿಯಿತು ಮಕ್ಕಳ ಜೀವ!

ಶಿಕ್ಷಣಾಧಿಕಾರಿಗಳ ವಾಹನ ಸಹ ಹೋಗಲಿಕ್ಕಾಗದಂಥ ಊರು ಕುಮಟಾದ ಮೇದಿನಿ. ಅಲ್ಲಿನ ಸರ್ಕಾರಿ ಶಾಲೆ  ಕುಸಿತ ( School ) ಕಂಡಿದ್ದು, ಶಿಕ್ಷಕರ ಮುನ್ನಚ್ಚರಿಕಾ ಕ್ರಮದಿಂದ ಮಕ್ಕಳ ಜೀವ ಉಳಿದಿದೆ.

60 ವರ್ಷ ಹಿಂದೆ ನಿರ್ಮಿಸಿದ ಮಣ್ಣಿನ ಗೋಡೆಯ ಶಾಲೆ ಇದಾಗಿದ್ದು, ಶಾಲೆಯ ( School ) ಗೋಡೆ ಬಿರುಕು ಮೂಡಿದ್ದನ್ನು ಶಿಕ್ಷಕರು ಗಮನಿಸಿದ್ದರು. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಮಕ್ಕಳನ್ನು ಬೇರೆಡೆ ಕರೆದೊಯ್ದು ಪಾಠ ಮಾಡುತ್ತಿದ್ದರು. ಮಳೆಗಾಲದ ಅವಧಿಯಲ್ಲಿ ಶಾಲೆ ಕುಸಿಯುವ ಸಾಧ್ಯತೆಗಳಿರುವ ಬಗ್ಗೆ ಪಾಲಕರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಸಮೀಪದ ಸಮುದಾಯ ಭವನದಲ್ಲಿ ಮಕ್ಕಳ ಕಲಿಕೆ ನಡೆದಿತ್ತು.

ಪ್ರಸ್ತುತ ಮೇದಿನಿ ಶಾಲೆಯ ( School ) ಗೋಡೆ ಮುರಿದು ಬಿದ್ದಿದೆ. ಮೇಲ್ಚಾವಣಿ ಕುಸಿದಿದೆ. ಅಳವಡಿಸಿದ್ದ ಹಂಚುಗಳೆಲ್ಲವೂ ನೆಲಕ್ಕೆ ಅಪ್ಪಳಿಸಿದೆ. ಈ ಅವಧಿಯಲ್ಲಿ ಶಾಲಾ ಒಳಗೆ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದೆ. ಮೇದಿನಿ ಗ್ರಾಮಕ್ಕೆ ತೆರಳಲು ರಸ್ತೆಯಿಲ್ಲ. ಕಾಲುದಾರಿ ಮಾತ್ರ ಇದ್ದಿದ್ದರಿಂದ ಶಿಕ್ಷಣಾಧಿಕಾರಿಗಳ ವಾಹನ ಸಹ ಇಲ್ಲಿ ಹೋಗಲ್ಲ.

`ಮೇದಿನಿ ಶಾಲೆಯ ಹಳೆಯ ಕಟ್ಟಡ ಶಿಥಿಲಗೊಂಡ ಕಾರಣ ಹೊಸ ಕಟ್ಟಡ ಮಂಜೂರಿಯಾಗಿದ್ದು, ಮಕ್ಕಳ ಕಲಿಕೆಗೆ ಬೇರೆಡೆ ವ್ಯವಸ್ಥೆ ಮಾಡಲಾಗಿದೆ’ ಎಂದು ಶಿಕ್ಷಣಾಧಿಕಾರಿ ಆರ್ ಎಲ್ ಭಟ್ಟ ಮಾಹಿತಿ ನೀಡಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page