6

Best officer | ಭಾನುವಾರವೂ ಬಿಡುವು ಪಡೆಯದ ಸರ್ಕಾರಿ ಅಧಿಕಾರಿ: ಅವರು ಮಾಡಿದ ಕೆಲಸವೇ ಬೇರೆ!

ಉತ್ತರ ಕನ್ನಡ ಜಿಲ್ಲಾ ಪಂಚಾಯತ ಯೋಜನಾಧಿಕಾರಿಯಾಗಿರುವ ( Best officer ) ವಿನೋದ್ ಅಣ್ವೇಕರ್ ಭಾನುವಾರ ಅಂಗನವಾಡಿ – ಶಾಲೆಗಳ ಅನುಕೂಲಕ್ಕಾಗಿ ತಮ್ಮ ಸ್ವಂತ ವೆಚ್ಚದಲ್ಲಿ ಹಲವು ಗಿಡಗಳನ್ನು ವಿತರಿಸಿದ್ದಾರೆ. ಶಾಲೆಗಳಲ್ಲಿ ನಡೆಯುವ ಬಿಸಿಯೂಟ ಹಾಗೂ ಪೌಷ್ಠಿಕ ಆಹಾರ ವಿತರಣೆಗಾಗಿ ಅವರು ಈ ಸೇವೆ ಸಲ್ಲಿಸಿದ್ದಾರೆ.

ಹಳಿಯಾಳದಿಂದ ಮಾವು ಹಾಗೂ ತೆಂಗಿನ ಗಿಡಗಳನ್ನು ತರಿಸಿಕೊಂಡ ಅವರು ಅಂಕೋಲಾ ತಾಲೂಕಿನ 35 ಅಂಗನವಾಡಿಗಳಿಗೆ ಅದನ್ನು ವಿತರಿಸಿದ್ದಾರೆ. `ಈ ಗಿಡಗಳನ್ನು ಕಾಳಜಿಯಿಂದ ಆರೈಕೆ ಮಾಡಿ ಅದರ ಫಲವನ್ನು ಮಕ್ಕಳಿಗೆ ವಿತರಿಸಬೇಕು’ ಎಂದು ಅವರು ಅಧೀನ ಅಧಿಕಾರಿಗಳಿಗೆ  (Best officer ) ಪ್ರೀತಿಯಿಂದಲೇ ತಾಕೀತು ಮಾಡಿದ್ದಾರೆ. ಈ ವೇಳೆ ಜೊತೆಯಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿರೂಪಾಕ್ಷ ಪಾಟೀಲ್, ಅಂಕೋಲಾ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನೀಲ್ ಎಂ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ ಜಿ ಭಟ್ ಇದಕ್ಕೆ ತಲೆಯಾಡಿಸಿ, ಗಿಡಗಳ ಆರೈಕೆಯ ಹೊಣೆ ಹೊತ್ತಿದ್ದಾರೆ.

ಈ ಹಿಂದೆ ಸಹ ವಿನೋದ ಅಣ್ವೇಕರ್ ತಮ್ಮ ತಂದೆ ಶಿಕ್ಷಕರಾಗಿದ್ದ ಶಾಲೆಗೆ ಹಲವು ಕೊಡುಗೆ ನೀಡಿದ್ದು, ಈ ಬಗ್ಗೆ `S News ಡಿಜಿಟಲ್’ ಜುಲೈ 1ರಂದು ವರದಿ ಪ್ರಕಟಿಸಿತ್ತು. ಆ ವರದಿ ಇಲ್ಲಿ ಓದಿ…

ತಂದೆ ಶಿಕ್ಷಕರಾಗಿದ್ದ ಶಾಲೆಗೆ ಮಗನ ಕೊಡುಗೆ ಅಪಾರ!

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page