6

House construction | ಮನೆ ನಿರ್ಮಾಣಕ್ಕೆ ಮೂರನೇ ವ್ಯಕ್ತಿ ತೊಂದರೆ: ದಾರಿ ಬಿಡದೇ ಬೀಗ ಜಡಿದ ಭೂಪ!

ಹೊನ್ನಾವರ: ನವೀಲುಗೋಣದಲ್ಲಿ ಮನೆ ನಿರ್ಮಿಸುತ್ತಿರುವ ( House construction ) ಗೀತಾ ಹಾಗೂ ಭಾಸ್ಕರ್ ನಾಯ್ಕ ಅವರಿಗೆ ದಾರಿ ಸಮಸ್ಯೆ ಎದುರಾಗಿದೆ. ಶ್ರೀಧರ ನಾರಾಯಣ ಮಡಿವಾಳ ಎಂಬಾತ ದಾರಿಗೆ ಗೇಟ್ ಅಳವಡಿಸಿ ಬೀಗ ಹಾಕಿದ್ದು, `ಈ ರಸ್ತೆಯಲ್ಲಿ ಓಡಾಡಿದರ ಜೀವ ತೆಗೆಯುವೆ’ ಎಂದು ಅವರಿಬ್ಬರಿಗೂ ಬೆದರಿಕೆ ಹಾಕಿದ್ದಾನೆ.

ದಾರಿ ವಿಷಯವಾಗಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದ್ದು, ಈ ನಡುವೆ ಆತ ಬೀಗ ಹಾಕಿ ಓಡಾಡುವುದಕ್ಕೆ ಅಡ್ಡಿ ನಡೆಸಿದ ವಿಷಯವಾಗಿ ಅಗಸ್ಟ 19ರಂದು ವಾಗ್ವಾದ-ಹಲ್ಲೆ ನಡೆದಿದೆ. ಈ ಮಾರ್ಗದಲ್ಲಿ ಗೀತಾ ಹಾಗೂ ಭಾಸ್ಕರ ಇಬ್ಬರು ಹೋಗುತ್ತಿದ್ದಾಗ ಅಡ್ಡಗಡ್ಡಿದ ಶ್ರೀಧರ `ಇನ್ಮುಂದೆ ಈ ದಾರಿಯಲ್ಲಿ ತಿರುಗಾಡಬಾರದು’ ಸೂಚನೆ ನೀಡಿ ಜಗಳಕ್ಕೆ ಬಂದಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಭಾಸ್ಕರನ ಮೇಲೆ ಹಲ್ಲೆ ನಡೆಸಿದ್ದು, ಆಗ ಭಾಸ್ಕರನ ಪತ್ನಿ ಗೀತಾ ಗಂಡನನ್ನು ತಪ್ಪಿಸಿದ್ದಾರೆ. ಆಗ ಶ್ರೀಧರ್ ಗೀತಾರನ್ನು ಉದ್ದೇಶಿಸಿ `ಮಾನಭಂಗ ಮಾಡಿ ಕೊಲೆ ಮಾಡುವೆ’ ಎಂದು ಬೆದರಿಕೆ ಒಡ್ಡಿದ್ದಾನೆ. ಮನೆ ನಿರ್ಮಾಣಕ್ಕೆ ( House construction ) ಮೂರನೇ ವ್ಯಕ್ತಿಯಿಂದ ಅನಗತ್ಯ ತೊಂದರೆ ಆಗುತ್ತಿರುವ ಬಗ್ಗೆ ಗೀತಾ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page