6

ಸಮಾಜದ ಏಳಿಗೆಗೆ ಬ್ರಾಹ್ಮಣರ ಕೊಡುಗೆ ಅಪಾರ

ಯಲ್ಲಾಪುರ: `ಎಲ್ಲಾ ವರ್ಗದ ಏಳಿಗೆಗೆ ಬ್ರಾಹ್ಮಣರ ಕೊಡುಗೆ ಅಪಾರ’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಭಾನುವಾರ ಎಪಿಎಂಸಿ ಆವಾರದಲ್ಲಿ ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘಟನೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. `ಸಮಾಜದ ಎಲ್ಲಾ ವರ್ಗದವರನ್ನು ಗೌರವಿಸಿ ಪುರಸ್ಕರಿಸುವ ಕಾರ್ಯ ಇತರರಿಗೆ ಆದರ್ಶ. ಸಮಾಜದಲ್ಲಿನ ಪ್ರತಿಭಾನ್ವಿತರನ್ನು ಗುರುತಿಸುವ ಕೆಲಸ ನಡೆಯಬೇಕು’ ಎಂದವರು ಹೇಳಿದರು. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ `ಸಂಘಟನೆಗಳ ಮೂಲಕ ಬ್ರಾಹ್ಮಣರು ಎಲ್ಲಾ ಸಮಾಜಕ್ಕೂ ಆದರ್ಶರಾಗಬೇಕು’ ಎಂದರು.

ತಹಶೀಲ್ದಾರ್ ಅಶೋಕ್ ಭಟ್ ಮಾತನಾಡಿ `ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಸಂಸ್ಕಾರ-ಸoಸ್ಕೃತಿಯ ಪರಂಪರೆಯನ್ನು ಪರಿಚಯಿಸಬೇಕು’ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಮಾತನಾಡಿ `ಸಂಘಟನೆ ಇದ್ದಾಗ ಮಾತ್ರ ಸಮಾಜ ಶಕ್ತಿಯುತವಾಗಿರುತ್ತದೆ’ ಎಂದರು. ಪೊಲೀಸ್ ಉಪನಿರೀಕ್ಷಕ ನಿರಂಜನ ಹೆಗಡೆ ಮಾತನಾಡಿ `ಪ್ರತಿಭಾವಂತರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ’ ಎಂದರು.

TMS ಅಧ್ಯಕ್ಷ ಎನ್ ಕೆ ಭಟ್ ಅಗ್ಗಾಶಿಕುಂಬ್ರಿ, ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಪ್ರಮುಖರಾದ ವಿ ಎಂ ಭಟ್, ರವಿಕಿರಣ ಹೆಗಡೆ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಭಟ್, ಡಿಜಿ ಹೆಗಡೆ ಇದ್ದರು. ಉಮ್ಮಚಗಿ ಪಾಠಶಾಲಾ ವಿದ್ಯಾರ್ಥಿ ಗಣಪತಿ ಭಟ್ ವೇದಘೋಷ ಪಠಿಸಿದರು. ಸಮೃದ್ಧಿ ಭಾಗ್ವತ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷೆ ಮುಕ್ತಾ ಶಂಕರ್ ಸ್ವಾಗತಿಸಿದರು. ನಾಗರಾಜ ಹೆಗಡೆ ನಿರ್ವಹಿಸಿದರು. ಶ್ರೀಧರ ಹೆಗಡೆ ವಂದಿಸಿದರು.

S News Digitel

ಅಂಚೆ ನೌಕರರಿಗೆ ಆತ್ಮೀಯ ಬೀಳ್ಕೊಡುಗೆ

ಕುಮಟಾ: ಪ್ರಧಾನ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿಭಾಯಿಸಿ ನಿವೃತ್ತರಾದ ಅಂಚೆ ಸಿಬ್ಬಂದಿ ಸುಧಾಕರ ಎಸ್. ಶೆಟ್ಟಿ ಹಾಗೂ ವಿನಾಯಕ ಸಿ. ಬಾಳೆಮನೆ ಅವರಿಗೆ ಅಂಚೆ ನೌಕರರು ಗೌರವಿಸಿ ಬೀಳ್ಕೊಟ್ಟರು.

ಕಾರವಾರ ಅಂಚೆ ವಿಭಾಗದ ಅಧೀಕ್ಷಕ ಧನಂಜಯ್ ಆಚಾರ್ ಮಾತನಾಡಿ `ವೃತ್ತಿಯಿಂದ ನಿವೃತ್ತಿ ಅನಿವಾರ್ಯ. ನಿವೃತ್ತಿಯವರೆಗೆ ದುಡಿಮೆ ಅನಿವಾರ್ಯ. ಮುಂದಿನ ಜೀವನವನ್ನು ಸುಂದರವಾಗಿ ನಿಮ್ಮದಾಗಿ ಕಳೆಯಿರಿ’ ಎಂದು ಹಾರೈಸಿದರು.

ಅಂಚೆ ನಿರೀಕ್ಷಕ ಗಿರೀಶ್ ಕುಮಾರ್, ಸಾಹಿತಿ ಎನ್. ಆರ್. ಗಜು ಪ್ರಮುಖ ಅಂಚೆ ನೌಕರರಾದ ಸಾವಿತ್ರಿ ವಿ ಭಟ್ಟ ಮಾತನಾಡಿದರು. ಪ್ರಮುಖರಾದ ಅನಿಲ್ ಬೇರಂಕಿ, ಸಿ.ಎಸ್. ನಾಯ್ಕ ಹಾಗೂ ಎಂ.ಎನ್. ನಾಯ್ಕ ಹಾಜರಿದ್ದರು. ಮಾಯಾ ಭಂಡಾರಿ ಪ್ರಾರ್ಥಿಸಿದರು. ಜ್ಯೋತಿಕಾ ಇನಾಂದಾರ್ ಸ್ವಾಗತಿಸಿದರು. ಗಾಯತ್ರಿ ನಾಯ್ಕ ಮತ್ತು ಇದಿರಾ ಮಡಿವಾಳ ಪರಿಚಯಿಸಿದರು. ವಿಶಾಲ್ ನಾಯ್ಕ ವಂದಿಸಿದರು. ಮಂಜುನಾಥ ನಾಯ್ಕ ನಿರೂಪಿಸಿದರು.

S News Digitel

ಸೇತುವೆ ತಡೆಗೋಡೆ ಬಗ್ಗೆ ಗಮನಹರಿಸಿ

ಕಾರವಾರ: `ಕೋಡಿಭಾಗ ಕಾಳಿ ನೂತನ ಸೇತುವೆಯ ಬದಿಯಲ್ಲಿರುವ ತಡೆಗೋಡೆ ಎತ್ತರ ಮಾಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಆಗ್ರಹಿಸಿದ್ದಾರೆ.

ಈ ಬಗ್ಗೆ ಅವರು ಜಿಲ್ಲಾಡಳಿತಕ್ಕೆ ಇಮೇಲ್ ಮಾಡಿದ್ದು, `ಕಾರವಾರ ಗೋವಾ ಮಾರ್ಗದ ಕಾಳಿ ಹಳೆಯ ಸೇತುವೆ ಮುರಿದು ಬಿದ್ದ ಕಾರಣ ಪಕ್ಕದ ನೂತನ ಸೇತುವೆ ಮೇಲಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಇದರಿಂದ ಸೈಕಲ್ ಹಾಗೂ ಬೈಕ್ ಸವಾರರಿಗೆ ತೊಂದರೆ ಆಗುತ್ತಿದ್ದು, ಕಾರು – ಲಾರಿ ಚಾಲಕರು ನಿಧಾನವಾಗಿ ವಾಹನ ಓಡಿಸುವ ಬಗ್ಗೆ ಸೂಚಿಸಬೇಕಿದೆ. ಈ ಸೇತುವೆಯ ತಡೆಗೋಡೆ ಚಿಕ್ಕದಾಗಿದ್ದು, ಸೇತುವೆಯ ತಡೆಗೋಡೆ ಮಾನವನ ಸೊಂಟದ ಮಟ್ಟದಲ್ಲಿದೆ. ತಡೆಗೋಡೆ ಮೇಲೆ ಕಬ್ಬಿಣದ ದೊಡ್ಡ ಪೈಪ್ ಅಳವಡಿಸಿ ತಡೆಗೋಡೆ ಎತ್ತರ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

S News Digitel

ಗಾಯತ್ರಿ ಮಹತ್ವ ಸಾರಿದ ಸಂಸ್ಕೃತ ವಿದ್ವಾಂಸ

ಕುಮಟಾ: `ಸಾಮಾನ್ಯವಾಗಿ ಎಲ್ಲ ದೇವತೆಗಳಿಗೂ ಗಾಯತ್ರಿ ಮಂತ್ರವಿದ್ದು, ಅವೆಲ್ಲವೂ ಆಯಾ ದೇವತೆಗಳ ಸಾಕಾರ ರೂಪದ ಉಪಾಸನೆಯಾಗಿದೆ’ ಎಂದು ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾರಾಯಣ ಯಾಜಿ ಹೇಳಿದರು.

ಕುಮಟಾ ಹವ್ಯಕ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ಯಾಜ್ಞವಲ್ಕ್ಯ ಸಾಂಸ್ಕೃತಿಕ ವೇದಿಕೆಯು ಹವ್ಯಕ ಸಭಾಮಂಟಪದಲ್ಲಿ ಆಯೋಜಿಸಿದ `ವೇದ ಮಾತೆ ಗಾಯತ್ರಿ ಮಂತ್ರ, ಅರ್ಥ ಹಾಗೂ ವ್ಯಾಪ್ತಿ’ ವಿಷಯದ ಕುರಿತು ಉಪನ್ಯಾಸ ನೀಡಿದರು. ವಿಶ್ವಾಮಿತ್ರ ಮುನಿಗಳ ಪೂರ್ವದಲ್ಲಿಯೂ ಗಾಯತ್ರಿ ಇತ್ತು. ವಿಶ್ವಾಮಿತ್ರರು ಅದಕ್ಕೆ ಕೆಲ ಪದ ಸೇರಿಸಿದರು’ ಎಂದರು. `ಗ್ರಹಸ್ಥರಿಗೆ ಗಾಯತ್ರಿ ಮುಖ್ಯವಾದರೆ, ಸಂನ್ಯಾಸಿಗಳಿಗೆ ಓಂಕಾರ ಮಾತ್ರ. ಎಲ್ಲಾ ಛಂದಸ್ಸುಗಳಿಗೂ ಗಾಯತ್ರಿ ಛಂದಸ್ಸು ಮೂಲಭೂತವಾಗಿದೆ’ ಎಂದರು.

`ಗಾಯತ್ರಿ ಉಪಾಸನೆಗೆ ಪ್ರಶಾಂತವಾದ ಬ್ರಾಹ್ಮೀ ಮುಹೂರ್ತವೇ ಪ್ರಶಸ್ತ. ಓಂಕಾರವಿಲ್ಲದ ಗಾಯತ್ರಿಗೆ ಅರ್ಥವಿಲ್ಲ. ಓಂಕಾರವು ಅ ಉ ಮ ಕಾರಗಳ ಸಂಗಮವಾಗಿದೆ’ ಎಂದರು. ಸಭಿಕರಿಂದ ಬಂದ ಸಂದೇಹದ ಪ್ರಶ್ನೆಗಳಿಗೆ ಪರಿಹಾರವನ್ನು ವಿವರಿಸಿದರು. ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀಕಾಂತ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಿಸಿದರು.

ಪ್ರಮುಖರಾದ ಸಾವಿತ್ರಿ ಭಟ್ಟ ,ಶಿವರಾಮ ಭಟ್ಟ, ವಿಘ್ನೇಶ್ವರ ಭಟ್ಟ ಹಾಜರಿದ್ದರು. ಮಂಜುನಾಥ ಹೆಗಡೆ ಪ್ರಾರ್ಥಿಸಿದರು. ಚಂದ್ರಶೇಖರ ಉಪಾದ್ಯಾಯ ಸ್ವಾಗತಿಸಿದರು. ಆರ್.ವಿ.ಹೆಗಡೆ ಬಧ್ರನ್ ವಂದಿಸಿದರು. ಎಂ ಎನ್ ಹೆಗಡೆ ನಿರ್ವಹಿಸಿದರು.

S News Digitel

ಗೋಶಾಲೆಗೆ ಮೇವು ವಿತರಣೆ

ಹಳಿಯಾಳ: ತುಳಜಾ ಭವಾನಿ ಧಾರ್ಮಿಕ, ಶೈಕ್ಷಣಿಕ ಮತ್ತು ಧರ್ಮಾರ್ಥ ಟ್ರಸ್ಟಿನವರು ಗೋರಕ್ಷಾ ಅಭಿಯಾನದಡಿಯಲ್ಲಿ ದುಸುಗಿ ಗ್ರಾಮದ ಸರ್ಕಾರಿ ಗೋಶಾಲೆಯಲ್ಲಿ ಆರೈಕೆ ಪಡೆಯುತ್ತಿರುವ ಜಾನುವಾರುಗಳಿಗೆ ಮೇವು ವಿತರಿಸಿದರು.
ಪಶು ಸಂಗೋಪನ ಇಲಾಖೆಯ ಸಹಕಾರದಲ್ಲಿ ಈ ಕಾರ್ಯ ನಡೆಯಿತು. ವಿ.ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಸಿಬ್ಬಂದಿಗಳು, ಪಶು ಇಲಾಖೆಯ ವೈದ್ಯರು ಉಪಸ್ಥಿತರಿದ್ದರು.

S News Digitel

ರಸ್ತೆ ಹೊಂಡ ಮುಚ್ಚಿದ ನಗರಸಭೆ ಅಧ್ಯಕ್ಷ

ದಾಂಡೇಲಿ: ನಗರದ ಬಹುತೇಕ ರಸ್ತೆಗಳು ಹೊಂಡಗಳಿoದ ಕೂಡಿದ್ದು, ಇದನ್ನು ಅರಿತ ನಗರಸಭೆ ಅಧ್ಯಕ್ಷ ಅಷ್ಪಾಕ್ ಶೇಖ ಗುಂಡಿಗಳನ್ನು ಮುಚ್ಚಿದರು.

ಗಣೇಶ ಹಬ್ಬದ ಹಿನ್ನಲೆ ರಸ್ತೆಯಲ್ಲಿ ಓಡಾಡುವ ಜನರಿಗೆ ಸಮಸ್ಯೆ ಆಗುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಇದಕ್ಕೆ ಅವರು ಸ್ಪಂದಿಸಿದರು. ನಗರದ ಭಟ್ ಆಸ್ಪತ್ರೆಯ ರಸ್ತೆಯ ಹೊಂಡ ಗುಂಡಿಗಳಿಗೆ ಜೆಸಿಬಿ ಮೂಲಕ ಮಣ್ಣು ತಂದು ಸುರಿದರು. ನಗರ ಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಾಗೇಂದ್ರ ದೊಡ್ಡಮನಿ, ನಗರಸಭೆ ಆರೋಗ್ಯ ನಿರೀಕ್ಷಕರಾದ ವಿಲಾಸ್ ಇದ್ದರು.

 

 

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page