6

ಎಲೆಮಾನವರ ಮೇಲೆ ಪೊಲೀಸರ ಬಾಣ!

ಉತ್ತರ ಕನ್ನಡ ಜಿಲ್ಲಾ ಪೊಲೀಸರು ಇದೀಗ ನಿರಂತರವಾಗಿ ಇಸ್ಪಿಟ್ ಅಡ್ಡೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಕಳೆದ ಮೂರು ದಿನದ ಅವಧಿಯಲ್ಲಿ ಹೊನ್ನಾವರ, ಕಾರವಾರ ಹಾಗೂ ಕುಮಟಾದಲ್ಲಿ ಪೊಲೀಸ್ ದಾಳಿ ನಡೆದಿದ್ದು, ಹಲವರ ಬಂಧನವಾಗಿದೆ.

ದೇಗುಲ ಪಕ್ಕ ಜೂಜಾಟ

ಶನಿವಾರ ಕಾರವಾರ ನಂದನಗದ್ದಾದ ಗಿಂಡಿ ದೇವಸ್ಥಾನದ ಬಳಿ ಆರು ಜನ ಇಸ್ಪಿಟ್ ಆಡುತ್ತಿದ್ದರು. ಆಗ ದಾಳಿ ನಡೆಸಿದ ಪೊಲೀಸರು ಜೋಶಿವಾಡದ ಮೀನುಗಾರ ಸಂತೋಷ ಮುಕುಂದ ಪಡಲಕರ್, ಕಡವಾಡದಲ್ಲಿ ಗೌಂಡಿ ಕೆಲಸ ಮಾಡುವ ವಿನಾಯಕ ಪಾಂಡಾ ನಾಯ್ಕ, ತಾರಿವಾಡ ಮಸೀದಿ ಬಳಿಯ ಮೀನುಗಾರ ಅನೀಲ ರೋಮೋ ಗಿರೀಫ್, ಕೆಎಚ್‌ಬಿ ಕಾಲೋನಿಯ ಬಟ್ಟೆ ವ್ಯಾಪಾರಿ ಉಮೇಶ ಕರ್ಪಸ್ವಾಮಿ ನಾಯರ್ ಹಾಗೂ ನಂದನಗದ್ದಾದ ವ್ಯಾಪಾರಿ ಆನಂದು ಶಾನಬಾಬು ನಾಯ್ಕ ಬಂಧಿಸಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡ ಕಡವಾಡದ ಶಿವಾನಂದ ಮಾಂಜ್ರೇಕರ್ ಪರಾರಿಯಾಗಿದ್ದು, ಬಂಧಿತರಿoದ 5100ರೂ ಹಣದ ಜೊತೆ ಇಸ್ಪಿಟ್ ಪರಿಕ್ಕರಗಳನ್ನು ವಶಕ್ಕೆ ಪಡೆದಿದ್ದಾರೆ.

ರೆಸಾರ್ಟ ಮೇಲೆ ದಾಳಿ
ಕುಮಟಾ ತಾಲೂಕಿನ ಗೋಕರ್ಣದ ದುಬ್ಬನಸಸಿಯಲ್ಲಿರುವ ರೆಸಾರ್ಟ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿ ಜೂಜಾಟ ಆಡುತ್ತಿದ್ದ 9 ಜನರನ್ನು ಬಂಧಿಸಿದ್ದಾರೆ. ಬಂಧಿತರಿoದ 77 ಸಾವಿರ ರೂ ಹಣದ ಜೊತೆ ಮೊಬೈಲ್ ಹಾಗೂ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಕುಮಟಾ ಕಡ್ಲೆಯ ನಾರಾಯಣ ಬೊಮ್ಮಣ್ಣ ನಾಯ್ಕ,ಬ್ರಹ್ಮೂರ ಖಂಡಗಾರನ ಸಂತೋಷ ಶ್ರೀನಿವಾಸ ನಾಯಕ, ಕುಮಟಾ ಲುಕ್ಕೇರಿಯ ವಿನಾಯಕ ನಾಗು ಗೌಡ, ಕುಮಟಾ ಹಳೆ ಬಸ್ ನಿಲ್ದಾಣದ ಹತ್ತಿರದ ನಿವಾಸಿ ಜಗದೀಶ ಗೋಯ್ದು ಗೌಡ, ಬರ್ಗಿಯ ನಾಗರಾಜ ಕೃಷ್ಣ ನಾಯ್ಕ, ಹನ್ಮಾಂವನ ನಾಗಾರಾಜ ನಾಗಪ್ಪ ಶೆಟ್ಟಿ, ಹೊನ್ನಾವರ ಹೊದ್ಕೆಶಿರೂರಿನ ಜಯಂತ ನಾರಾಯಣ ಪಟಗಾರ, ಹೊನ್ನಾವರ ಮಾಡಗೇರಿಯ ರಾಮಚಂದ್ರ ಮಾಸ್ತಿ ಪಟಗಾರ, ಹಿರೇಗುತ್ತಿಯ ಉಮೇಶ ಮಾರುತಿ ಗಾಂವಕರ ಬಂಧಿತರು,

ಹೊನ್ನಾವರದಲ್ಲಿಯೂ ದಾಳಿ
ಮಾಸ್ತಿಕಟ್ಟೆಯಿಂದ ವೆಂಕಟ್ರಮಣ ದೇವಸ್ಥಾನಕ್ಕೆ ಹೋಗುವ ಕಾರ್‌ಸ್ಟೀಟ್ ರಸ್ತೆಯಲ್ಲಿ ಇರುವ ಮನೆಯ ಮಾಳಿಗೆ ಮೇಲೆ ಇರುವ ಕ್ಲಬ್ ಮೇಲೆ ಪೊಲೀಸರು ದಾಳಿ ನಡೆಸಿ ಎಂಟು ಜನರನ್ನು ಬಂದಿಸಿದ್ದಾರೆ.

ರಥಬೀದಿಯ ಪ್ರದೀಪ ನಾಗಪ್ಪ ಶೆಟ್ಟಿ, ನಾಗಪ್ಪ ಗೋವಿಂದ ಪಟಗಾರ ಹೊದಿಕೆ ಶಿರೂರ, ಸ್ವಾಗತ ರಿಕ್ರಿಯೇಷನ್ ಸ್ಪೋಟ್ಸ ಅಸೋಷಿಯೇಷನ್ ಅಧ್ಯಕ್ಷ ದೈವಜ್ಞ ಜ್ಯೋತಿ, ಕಾರ್ ಸ್ಟ್ರೀಟ್‌ನ ಶ್ರೀಪಾದ ವಾಸುದೇವ ಜನ್ನು, ಅಣ್ಣಪ್ಪ ಸುಕ್ರು ಹರಿಕಂತ್ರ ಹೊಸಹಿತ್ತಲ, ಬಸವರಾಜ ಕಲ್ಲಪ್ಪ ಹುಬ್ಬಳ್ಳಿ, ಭಾಸ್ಕರ ದತ್ತಾ ನಾಯ್ಕ ಮಂಕಿ, ಚಿತ್ತಾರ, ವಿನಯಕುಮಾರ ನಾಗೇಶ ಶೆಟ್ಟಿ ಬೈಂದೂರು, ಕೃಷ್ಣ ನಾರಾಯಣ ನಾಯ್ಕ ಬಂಧಿತರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page