6

ಬರಿಗೈಯಲ್ಲಿ ಬಂದವನಿಗೆ ಬೊಗಸೆ ತುಂಬ ಪ್ರೀತಿ: ಶಿಕ್ಷಕನ ಜೋಳಿಗೆ ತುಂಬ ಉಡುಗರೆಗಳ ರಾಶಿ!

ಬರಿಗೈಯಲ್ಲಿ ಯಲ್ಲಾಪುರಕ್ಕೆ ಬಂದ ಶಿಕ್ಷಕ ಸಂತೋಷ ಕೊಳಗೇರಿ ಮಕ್ಕಳಿಗೆ ತಮ್ಮ ವೃತ್ತಿ ಜೀವನದ ಕೊನೆಯ ಪಾಠ ಮಾಡಿದ್ದು, ಇದಾದ ನಂತರ ಬೊಗಸೆ ತುಂಬ ಪ್ರೀತಿಯೊಂದಿಗೆ ನಿವೃತ್ತರಾದರು. ನೂರಾರು ಸಂಖ್ಯೆಯ ಅಭಿಮಾನಿಗಳು ಅವರ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಬಂದು ಬೆಳೆಬಾಳುವ ಉಡುಗರೆಗಳನ್ನು ನೀಡಿದರು. ಬಂಗಾರದ ಉಂಗುರ, ಮೊಬೈಲ್ ಫೋನ್ ಸೇರಿದಂತೆ ಅನೇಕ ಉಡುಗರೆಗಳು ದೊರೆತಿದ್ದು ಅವರ ಮೇಲಿನ ಅಭಿಮಾನವನ್ನು ಪ್ರದರ್ಶಿಸಿತು.

ಮಲವಳ್ಳಿ ಶ್ರೀ ರಾಮಲಿಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಮಲವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಕುಂಟೆಕಳಿ `ಸಂತೋಷ ಕೋಳಗೇರಿ ಅವರು ಒಬ್ಬ ಪ್ರಬುದ್ಧ ಶಿಕ್ಷಕರಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರವoತ ಶಿಕ್ಷಣ ನೀಡಿದ್ದಾರೆ’ ಎಂದು ಸ್ಮರಿಸಿದರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ ಮಾತನಾಡಿ `ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡ ಅಪರೂಪದ ಶಿಕ್ಷಕ ಸಂತೋಷ್ ಅವರು ಎಲ್ಲರಿಗೂ ಮಾದರಿ’ ಎಂದರು.

ದೇವಸ್ಥಾನದ ಮೊಕ್ತೇಸರ್ ರವಿ ಹುಳ್ಸೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಆರ್ ಭಟ್, ಸದಾನಂದ ಭಟ್ಟ , ಸಿ ಆರ್ ಪಿ ಪ್ರಭಾಕರ ಭಟ್ ಮಾತನಾಡದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್ಟ ನಿವೃತ್ತ ಶಿಕ್ಷಕರಿಗೆ ಗೌರವಿಸಿದರು. ಪೂನಂ ನಾಯಕ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಸುದರ್ಶನ್ ಭಟ್ಟ ಸ್ವಾಗತಿಸಿದರು. ಶಿಕ್ಷಕಿ ಮೇಘಶ್ರೀ ನಿರ್ವಹಿಸಿದರು. ಶಿಕ್ಷಕ ಶ್ರೀಧರ್ ವಂದಿಸಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page