6

ಅಲೆಗಳ ಅಬ್ಬರ | ಬಾಲಕನನ್ನು ರಕ್ಷಿಸಿದ ಕರಾವಳಿ ಪಡೆ: ಗಣೇಶನ ಜೊತೆ ನೀವು ಮುಳುಗದಿರಿ!

ಭಟ್ಕಳ: ಗಣೇಶನ ಮೂರ್ತಿ ವಿಸರ್ಜಿಸಲು ಅರಬ್ಬಿ ಸಮುದ್ರಕ್ಕೆ ಹೋಗಿ ಅಲೆಗಳ ಅಬ್ಬರಕ್ಕೆ ಸಿಲುಕಿದ ಲ್ಲಿ ಸಮರ್ಥ ಶ್ರೀಧರ ಖಾರ್ವಿ (14) ಎಂಬಾತನನ್ನು ಕರಾವಳಿ ಕಾವಲು ಪಡೆಯವರು ರಕ್ಷಿಸಿದ್ದಾರೆ.

ತಲಗೋಡಿನಲ್ಲಿ ಸ್ಥಾಪಿಸಲಾದ ಗಣಪನ ವಿಗ್ರಹ ವಿಸರ್ಜನೆಗೆ ಊರಿನವರು ಭಾನುವಾರ ಸಮುದ್ರಕ್ಕೆ ಬಂದಿದ್ದರು. ಆಗ ಗಣೇಶನ ವಿಗ್ರಹ ಜೊತೆ ಇದ್ದ ಸಮರ್ಥ ಖಾರ್ವಿ ಸಮುದ್ರಕ್ಕೆ ಇಳಿದಿದ್ದ. ವಿಗ್ರಹದ ಜೊತೆ ನೀರಿನಲ್ಲಿ ಮುಂದೆ ಹೋಗಿದ್ದು ಗಣಪನನ್ನು ಮುಳುಗಿಸಿದ ನಂತರವೂ ಅಲ್ಲಿಯೇ ಇದ್ದ. ಆಗ ಏಕಾಏಕಿ ಬಂದ ಅಬ್ಬರದ ಅಲೆಯಲ್ಲಿ ಸಮರ್ಥ ಖಾರ್ವಿ ಕೊಚ್ಚಿ ಹೋಗಿದ್ದ.

ತಕ್ಷಣ ಇದನ್ನು ನೋಡಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಾಘವೇಂದ್ರ ನಾಯ್ಕ, ಸಚಿನ್ ಖಾರ್ವಿ ಸಮುದ್ರಕ್ಕೆ ಜಿಗಿದು ಬಾಲಕ ಜುಟ್ಟು ಹಿಡಿದು ದಡಕ್ಕೆ ಎಳೆದು ತಂದರು. ಅಸ್ವಸ್ಥಗೊoಡ ಆತನನ್ನು ಇದೀಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಾವಳಿ ಕಾವಲು ಪಡೆಯ ಸಿಪಿಐ ಕುಸುಮಾಧರ ಕೆ ಆತನ ಆರೋಗ್ಯ ವಿಚಾರಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page