6

ಎರಡು ಲಾರಿ ನಡುವೆ ಸಿಕ್ಕಿಬಿದ್ದ ಕಾರು: ಹಬ್ಬಕ್ಕೆ ಹೊರಟವರಿಗೆ ಪೊಲೀಸ್ ಠಾಣೆ ತಿರುಗಾಟ!

ಯಲ್ಲಾಪುರ: ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಸಂಚರಿಸುತ್ತಿದ್ದ ಕಾರು ಭಾನುವಾರ ಕಿರವತ್ತಿ ಬಳಿ ಎರಡು ಲಾರಿಗಳ ನಡುವೆ ಸಿಲುಕಿ ಸಂಪೂರ್ಣ ಜಖಂ ಆಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ವಾಹನ ದಟ್ಟಣೆಯಿದ್ದು, ಎಲ್ಲಾ ವಾಹನಗಳು 20 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದವು. ಹುಬ್ಬಳ್ಳಿ ನವನಗರದ ಮಧುಕರ ರಾಯ್ಕರ್ ಎಂಬಾತರು ಸಹ ಕಿರವತ್ತಿ ಬಳಿ ನಿಧಾನವಾಗಿ ಕಾರು ಓಡಿಸುತ್ತಿದ್ದರು. ಆಗ ದೊಡ್ಡ ಲಾರಿಯೊಂದು ಅವರ ಕಾರಿಗೆ ಹಿಂದಿನಿoದ ಗುದ್ದಿದ್ದು, ಲಾರಿ ಗುದ್ದಿದ ರಭಸಕ್ಕೆ ಕಾರು ಮುಂದಿದ್ದ ಇನ್ನೊಂದು ಲಾರಿಗೆ ಡಿಕ್ಕಿಯಾಗಿದೆ. ಎರಡು ಲಾರಿಗಳ ನಡುವೆ ಸಿಲುಕಿದ ಕಾರು ಪರಸ್ಪರ ಗುದ್ದಿ ಸಂಪೂರ್ಣ ಜಖಂ ಆಗಿದೆ.

ನಾಲ್ಕು ತಿಂಗಳ ಹಿಂದೆ ಖರೀದಿಸಿದ ಕಾರು ಇದಾಗಿತ್ತು. ಈ ಕಾರಿನಲ್ಲಿ ಒಟ್ಟು 6 ಜನ ಸಂಚರಿಸುತ್ತಿದ್ದರು. ಕಾರು ಹಾಗೂ ಮುಂದಿದ್ದ ಲಾರಿ ನಿಧಾನವಾಗಿ ಚಲಿಸುತ್ತಿದ್ದ ಕಾರಣ ಈ ಅಪಘಾತದಿಂದ ಯಾರಿಗೂ ಹೆಚ್ಚಿನ ಪೆಟ್ಟಾಗಿಲ್ಲ. ಗೋಕರ್ಣದ ಬಂಕಿಕೊಡ್ಲ ಮೂಲದವರಾದ ಮಧುಕರ ರಾಯ್ಕರ್ ಅವರು ಹಬ್ಬದ ನಿಮಿತ್ತ ಹುಬ್ಬಳ್ಳಿಯಿಂದ ಹೊರಟು ಊರಿಗೆ ತೆರಳುತ್ತಿದ್ದರು.

ಕಾರು ಅಪಘಾತದಿಂದ ಅವರು ತೊಂದರೆ ಅನುಭವಿಸಿದರು. ಹಬ್ಬ ಆಚರಿಸಲಾಗದೇ ಪೊಲೀಸ್ ಠಾಣೆ ತಿರುಗಾಟ ನಡೆಸಿದರು. ಕೊನೆಗೆ ರಾಜಿ ಸಂದಾನದ ಮೂಲಕ ಈ ಪ್ರಕರಣ ಬಗೆಹರಿಸಿಕೊಳ್ಳಲಾಯಿತು. ಅದಾಗಿಯೂ ಈ ಅಪಘಾತದಿಂದ ಕಾರು ಮಾಲಕರಿಗೆ ಅಂದಾಜು 4 ಲಕ್ಷ ರೂ ನಷ್ಟವಾಗಿದೆ.

  • Related Posts

    ವಿದ್ಯಾರ್ಥಿಗಳನ್ನು ಡ್ರಗ್ಸ್‌ನಿಂದ ದೂರವಿಡಲು ಕ್ರಮ: ಎಸ್.ಪಿ ಯಶೋಧಾ ವಂಟಗೋಡಿ

    Share this… Facebook Pinterest Twitter Linkedin Whatsappವಿದ್ಯಾರ್ಥಿ ನಿಲಯಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ -ಎಸ್ ಪಿ ಶ್ರೀಮತಿ ಯಶೋಧಾ ವಂಟಗೋಡಿ ಹಾವೇರಿ: ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದಂತೆ ತಡೆಯಲು ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ…

    ಮಹಿಳೆಯ ಪಕ್ಕದಲ್ಲೇ ಮಲಗಿ ಕಳ್ಳತನಕ್ಕೆ ಯತ್ನಿಸಿದ ಖದೀಮ!

    Share this… Facebook Pinterest Twitter Linkedin Whatsappಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಧ್ಯರಾತ್ರಿ ಕಳ್ಳನ ಕಾಟ; ಮಹಿಳೆಯ ಹಾಸಿಗೆಯೊಳಗೆ ನುಸುಳಿದ ಖದೀಮ! ಹಾವೇರಿ: ನಗರದ ಜಿಲ್ಲಾಸ್ಪತ್ರೆಯ ವಾರ್ಡ್‌ನಲ್ಲಿ ಮಧ್ಯರಾತ್ರಿ ಕಳ್ಳನೊಬ್ಬ ವಿಚಿತ್ರ ರೀತಿಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಪಕ್ಕದಲ್ಲೇ…

    You cannot copy content of this page