ಜೊಯಿಡಾ: ಕೆನರಾ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯ ಮಾತು ಕೇಳಿದ ರಿಕ್ಷಾ ಚಾಲಕ ರಾಮದಾಸ ಮಿರಾಶಿ OTP ಹೇಳಿ 62 ಸಾವಿರ ರೂ ಹಣ ಕಳೆದುಕೊಂಡಿದ್ದಾರೆ.
ರಾಮನಗರದ ಕೃಷ್ಣಾಗಲ್ಲಿರ ರಾಮದಾಸ ಮಿರಾಶಿ ಅವರ ಮೊಬೈಲಿಗೆ ಅಕ್ಟೊಬರ್ 18ರಂದು ಬ್ಯಾಂಕ್ ಖಾತೆ ಸ್ಥಗಿತವಾಗಿರುವ ಬಗ್ಗೆ ಮೆಸೆಜ್ ಬಂದಿದೆ. ಅದಾದ ನಂತರ ಅವರೇ ಅಲ್ಲಿದ್ದ ಸಂಖ್ಯೆಗೆ ಫೋನ್ ಮಾಡಿದ್ದಾರೆ. ಟ್ರೂ ಕಾಲರ್’ನಲ್ಲಿ ಕೆನರಾ ಬ್ಯಾಂಕ್ ಎಂದು ಕಾಣಿಸಿದ್ದು ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಸಹ ತನ್ನನ್ನು `ಕೆನರಾ ಬ್ಯಾಂಕ್ ಅಧಿಕಾರಿ’ ಎಂದು ಪರಿಚಯಿಸಿಕೊಂಡಿದ್ದಾನೆ. ಕೆವೈಸಿ ದಾಖಲೆ ಅಪ್ಡೇಟ್ ಮಾಡುವುದಾಗಿ ಆತ ತಿಳಿಸಿದ ಕಾರಣ ರಾಮದಾಸ ಮಿರಾಶಿ ಮಾಹಿತಿ ನೀಡಿದ್ದಾರೆ.
ನಂತರ ಎರಡು ಬಾರಿ ಒಟಿಪಿ ಬಂದಿದ್ದು, ಅದನ್ನು ಹೇಳುವಂತೆ ತಿಳಿಸಿದಾಗ ರಾಮದಾಸ್ OTP ಸಂಖ್ಯೆ ತಿಳಿಸಿದ್ದಾರೆ. ಆಗ, ಅವರ ಖಾತೆಯಲ್ಲಿದ್ದ ಹಣ ಖಾಲಿಯಾಗಿದೆ. ಮೋದ ಹೋದ ಅವರು ಪೊಲೀಸ್ ದೂರು ನೀಡಿ ಹಣ ಮರಳಿಸುವಂತೆ ಮನವಿ ಮಾಡಿದ್ದಾರೆ.