ಅಂಕೋಲಾ: ಪ್ರತಿಭಾ ಕಾರಂಜಿಯಲ್ಲಿ ಮೇಲಿನಗುಳಿ ಶಾಲಾ ಮಕ್ಕಳು ಭಾಗವಹಿಸಿದ್ದು ವಿವಿಧ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದ್ದಾರೆ.
ಚಿತ್ರಕಲೆಯಲ್ಲಿ ದೀಕ್ಷಾ ಗೌಡ, ಅಭಿನಯ ಗೀತೆಯಲ್ಲಿ ಪ್ರಥ್ವಿ ಗೌಡ, ಛದ್ಮವೇಷದಲ್ಲಿ ವಿನೋದ ಗೌಡ, ಭಕ್ತಿ ಗೀತೆಯಲ್ಲಿ ಸಾನ್ವಿ ಗುನಗಾ, ಅಭಿನಯ ಗೀತೆಯಲ್ಲಿ ಅಂಕಿತಾ ಗೌಡ, ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಸಾನ್ವಿ ಗೌಡ ಸಾಧನೆ ಮಾಡಿದ್ದಾರೆ.
ಇದರೊಂದಿಗೆ ದೇಶಭಕ್ತಿ ಗೀತೆಯಲ್ಲಿ ಅನಿತಾ ಗೌಡ, ಚಿತ್ರಕಲೆಯಲ್ಲಿ ಮಣೀಶ ಗೌಡ, ಕಥೆ ಹೇಳುವುದರಲ್ಲಿ ಧನ್ಯಾ ಗೌಡ ಹಾಗೂ ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಅಂಕಿತಾ ಗೌಡ ಬಹುಮಾನ ಪಡೆದಿದ್ದಾರೆ.
ಈ ಮಕ್ಕಳಿಗೆ ಮುಖ್ಯ ಶಿಕ್ಷಕಿ ಮಾಲಿನಿ ನಾಯಕ ತರಬೇತಿ ನೀಡಿದ್ದರು.



