ಯಲ್ಲಾಪುರ: ಎಪಿಎಂಸಿ ಆವರಣದ ಅಡಿಕೆ ಭವನದಲ್ಲಿ `Art Of Living’ ಧ್ಯಾನ ಶಿಬಿರ ನಡೆಯಿತು. ಸುದರ್ಶನ ಕ್ರಿಯೆ ಕುರಿತು ದೀಪಿಕಾ ಭಟ್ಟ ಮಾಹಿತಿ ನೀಡಿದರು.
ಭಾನುವಾರ ಓಂಕಾರ ಯೋಗ ಕೇಂದ್ರದಲ್ಲಿ ಶಿಬಿರ ಮುಕ್ತಾಯವಾಗಿದ್ದು, ಮುಂದಿನ ದಿನದಲ್ಲಿ ಮೇದಾ ಶಿಬಿರ ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಸುದರ್ಶನ ಕ್ರಿಯಾ ಶಿಬಿರದಲ್ಲಿ ಜ್ಞಾನ, ಧ್ಯಾನ, ಯೋಗ, ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆ ನಡೆಸುವ ವಿಧಾನಗಳ ಬಗ್ಗೆ ಕಲಿಸಲಾಯಿತು.
ಮಕ್ಕಳ ಜ್ಞಾಪಕಶಕ್ತಿ ಹಾಗೂ ಏಕಾಗ್ರತೆ ಹೆಚ್ಚಲು ನಡೆಸುವ `ಮೇಧಾ ಯೋಗ ಶಿಬಿರ’ದಲ್ಲಿ ಭಾಗವಹಿಸಲು ಇಚ್ಚಿಸುವವರು ಸುಬ್ರಾಯ ಭಟ್ ಅವರಿಗೆ ಕರೆ ಮಾಡಿ. ಫೋನ್ ನಂ: 9482185480



