6

`ಡಾ ಬ್ರೋ’ ಕಂಪನಿಯ ಕರಾವಳಿ ಪ್ರವಾಸ: ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!

`ಜಗತ್ತಿನ ಮೂಲೆ ಮೂಲೆಯನ್ನು ತೋರಿಸುತ್ತೇನೆ’ ಎಂದು ಹೇಳಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ದೇಶ-ವಿದೇಶಗಳನ್ನು ಸುತ್ತುತ್ತಿರುವ ಗಗನ್ ಶ್ರೀನಿವಾಸ್ ಇದೀಗ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರನ್ನು ಕರೆತರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಗೋಕರ್ಣ ಸೌಂದರ್ಯ ಆಹ್ವಾದಿಸಿ ಆ ಬಗ್ಗೆ ವಿಡಿಯೋ ಮಾಡಿರುವ ಗಗನ್ ಶ್ರೀನಿವಾಸ್ ಇಲ್ಲಿನ ವಿಡಿಯೋಗಳನ್ನು ಹಂಚಿಕೊoಡಿದ್ದಾರೆ.

`ಡಾ ಬ್ರೋ’ ಎಂದೇ ಖ್ಯಾತಿ ಪಡೆದಿರುವ ಗಗನ್ ಶ್ರೀನಿವಾಸ ಅವರು `ಗೋ ಪ್ರವಾಸ’ ಎಂಬ ಕಂಪನಿ ಶುರು ಮಾಡಿದ್ದಾರೆ. ಆ ಕಂಪನಿಯ ಮೂಲಕ ಅವರು ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜಿಸಲು ಯೋಜನೆ ರೂಪಿಸಿದ್ದಾರೆ. ಗೋಕರ್ಣ -ಹೊನ್ನಾವರ – ಮುರುಡೇಶ್ವರದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆಯರುವ ಬಗ್ಗೆ ಅವರು ಮಾಹಿತಿ ಹಂಚಿಕೊoಡಿದ್ದಾರೆ. ಸದ್ಯ ಅವರು ಹಾಕಿಕೊಂಡಿರುವ ಯೋಜನೆಯಲ್ಲಿ ಗೋಕರ್ಣ ಕಡಲತೀರ ಪ್ರವಾಸ ಮುಖ್ಯವಾಗಿದೆ. ಪ್ರತಿ ಶುಕ್ರವಾರ ತಂಡದ ಜೊತೆ ಮಾರ್ಗದರ್ಶಕರನ್ನು ಇಲ್ಲಿ ಕಳುಹಿಸಲಿದ್ದಾರೆ. 3499 ರೂಪಾಯಿಗೆ ಊಟ-ವಸತಿ ಜೊತೆ ರೆಸಾರ್ಟಿನಲ್ಲಿ ತಂಗುವ ಅವಕಾಶವನ್ನು ಅವರು ಮಾಡಿಕೊಟ್ಟಿದ್ದಾರೆ.

ಗೋ ಪ್ರವಾಸ ಕಂಪನಿಯ ಜೊತೆ ಬರುವ ಪ್ರವಾಸಿಗರು ಬೇಲೆಕಾನ್ ಕಡಲತೀರದಿಂದ ಚಾರಣ ಶುರು ಮಾಡಲಿದ್ದು, ಓಂ ಕಡಲತೀರ, ಕುಡ್ಲೆ ಕಡಲತೀರವನ್ನು ಆಹ್ವಾದಿಸಲಿದ್ದಾರೆ. ಅದಾದ ನಂತರ ಸೂರ್ಯಾಸ್ತದ ದೃಶ್ಯಾವಳಿಗಳನ್ನು ಅನುಭವಿಸಿ ನಂತರ ರೆಸಾರ್ಟ’ಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ. ಹೊನ್ನಾವರದಲ್ಲಿ ದೋಣಿ ವಿಹಾರ, ಮುರುಡೇಶ್ವರ ದೇವಾಲಯ ದರ್ಶನ ಸೇರಿ ಹಲವು ಸ್ಥಳಗಳ ಪ್ರವಾಸವನ್ನು ಈ ಪ್ಯಾಕೇಜ್ ಒಳಗೊಂಡಿದೆ.

ಪ್ರವಾಸಿಗರು ಬೆಂಗಳೂರಿನಿoದ ಹೊರಟು ಮತ್ತೆ ಬೆಂಗಳೂರಿಗೆ ತಲುಪುವವರೆಗಿನ ಎಲ್ಲಾ ಬಗೆಯ ಜವಾಬ್ದಾರಿಯನ್ನು ಗೋ ಪ್ರವಾಸ ಕಂಪನಿ ಹೋರಲಿದೆ. ಜಲಸಾಹಸ ಕ್ರೀಡೆಗಳಲ್ಲಿ ಆಸಕ್ತಿಯಿರುವವರಿಗೂ ಗೋ ಪ್ರವಾಸ ಕಂಪನಿ ಮಾರ್ಗದರ್ಶನ ನೀಡಲಿದೆ. ಪ್ರಸ್ತುತ ಗೋ ಪ್ರವಾಸ ಕಂಪನಿ ರೂಪಿಸಿರುವ ಯೋಜನೆಯಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ಸಿಗಲಿದ್ದು, ಇಲ್ಲಿನ ಸಂಸ್ಕೃತಿ-ಪರoಪರೆ ಇನ್ನಷ್ಟು ಬೆಳಗಲಿದೆ. ಗೋ ಪ್ರವಾಸ ಕಂಪನಿಯ ಪ್ರವಾಸದ ವಿವರಗಳಿಗೆ ಇಲ್ಲಿ ಫೋನ್ ಮಾಡಿ: 9606024613

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    You cannot copy content of this page