ಮುಂಡಗೋಡು: ಎಗ್‌ರೈಸ್ ಅಂಗಡಿ ನಡೆಸಿ ಬದುಕು ನಡೆಸುತ್ತಿದ್ದ ಅರ್ಜುನ್ ಸಿಂಗ್ ಮನೆಯಲ್ಲಿ ಕಳ್ಳತನವಾಗಿದೆ.
ಭಾರತನಗರದ ಅರ್ಜುನ್ ಸಿಂಗ್ ಠಾಕೂರ್ 50 ಸಾವಿರ ರೂ ಹಣದ ಜೊತೆ ಚಿನ್ನಾಭರಣವನ್ನು ಸಹ ಕಳೆದುಕೊಂಡಿದ್ದಾರೆ. ಅಕ್ಟೊಬರ್ 28ರ ಬೆಳಗ್ಗೆ 11 ಗಂಟೆ ನಂತರ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಸಂಜೆ 5 ಗಂಟೆ ಅವಧಿಗೆ ಅವರು ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.
ಭಾರತನಗರದ ಅರ್ಜುನ್ ಮನೆಯ ಕಿಟಕಿಯ ಜ್ಯಾಲರಿ ತೆಗೆದ ಕಳ್ಳರು ಅಲ್ಲಿಂದ ಮನೆ ಒಳಗೆ ನುಗ್ಗಿದ್ದಾರೆ. ಮನೆ ಒಳಗಡೆ ಇದ್ದ ಬಾಗಿಲು ಒಡೆದಿದ್ದಾರೆ. ಅದಾದ ನಂತರ ಕೋಣೆ ಪ್ರವೇಶಿಸಿ ಅಲ್ಲಿದ್ದ ಚಿನ್ನದ ಉಂಗುರ, ಬೆಳ್ಳಿ ಕೈಗಡ ಸೇರಿ ಹಣವನ್ನು ಎಗರಿಸಿದ್ದಾರೆ. ಮನೆಯಲ್ಲಿದ್ದ ಮೊಬೈಲನ್ನು ಕಳ್ಳರು ಬಿಟ್ಟಿಲ್ಲ.
ಹಣ ಸೇರಿ ಒಟ್ಟು 1.46 ಲಕ್ಷ ರೂ ಮೌಲ್ಯದ ಸಾಮಗ್ರಿ ಕಳ್ಳತನವಾದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಕಳ್ಳರ ಹುಡುಕಾಟ ನಡೆಸಿದ್ದಾರೆ.




