ಗೋವಾದಿoದ ಕಳ್ಳನನ್ನು ಬಂಧಿಸಿ ಕರೆತರುತ್ತಿದ್ದ ಕಾರಿಗೆ ಕಂಟೇನರ್ ಗುದ್ದಿದ ಪರಿಣಾಮ ಕಳ್ಳನ ಜೊತೆ ಪೊಲೀಸರು ಗಾಯಗೊಂಡಿದ್ದಾರೆ.
ಬುಧವಾರ ಹಳಿಯಾಳ ಠಾಣೆಯ ಪೊಲೀಸರು ಗೋವಾಗೆ ತೆರಳಿದ್ದರು. ಆನಮೋಡಿನ ಬಳಿ ಕಳ್ಳನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆತರುತ್ತಿದ್ದರು. ಕಳ್ಳನನ್ನು ಬಂಧಿಸುವ ಕಾರ್ಯಾಚರಣೆಗೆ ಕೆಎ 31 ಎಂ 6701 ನೊಂದಣಿಯ ಖಾಸಗಿ ವಾಹನ ಬಳಸಿದ್ದರು.
ಜೊಯಿಡಾ ತಾಲೂಕಿನ ರಾಮನಗರದ ಬಳಿ ಆ ಕಾರಿಗೆ ಕಂಟೇನರ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂ ಆಗಿದೆ. ಕಳ್ಳನನ್ನು ಸೇರಿ ಕಾರಿನ ಒಳಗಿದ್ದ ಹಲವರು ಗಾಯಗೊಂಡಿದ್ದಾರೆ. ಪಿಎಸ್‌ಐ ಅಮೀನ ಅಖ್ತರ್, ಪೊಲೀಸ್ ಸಿಬ್ಬಂದಿ ಇಸ್ಮಯಲ್ ಕೋಟನಕೇರಿ, ಹನೀಪ ಮುಲ್ಲಾ, ಲಕ್ಷö್ಮಣ ಪೂಜಾರಿ ಹೋಂ ಗಾರ್ಡ ರವಿ ಮಿರಾಜಕರ್ ಗಂಭೀರ ಗಾಯಗೊಂಡವರು. ಈ ಪೈಕಿ ಇಬ್ಬರು ಪೊಲೀಸರ ಸ್ಥಿತಿ ಗಂಭೀರವಾಗಿದೆ.
ಗಾಯಗೊoಡ ಎಲ್ಲರನ್ನು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಟೇನರ್ ಚಾಲಕ ತನ್ನ ವಾಹನ ಬಿಟ್ಟು ಪರಾರಿಯಾಗಿದ್ದು, ಆತನ ಶೋಧವೂ ನಡೆಯುತ್ತಿದೆ.




