6
  • Latest

ಎಲ್ಲರಿಗಿಂತ ವಿಚಿತ್ರ ಈ ವೈದ್ಯ: ಅಂಗಡಿಯೊಳಗೆ ಬುರುಡೆ ಡಾಕ್ಟರ್!

ರಿಕ್ಕಿ ಗಾಯನ: ಸಂಗೀತ ಪ್ರೇಮಿಗಳಲ್ಲಿ ಸಂಚಲನ

ರಿಕ್ಕಿ ಗಾಯನ: ಸಂಗೀತ ಪ್ರೇಮಿಗಳಲ್ಲಿ ಸಂಚಲನ

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, May 19, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಎಲ್ಲರಿಗಿಂತ ವಿಚಿತ್ರ ಈ ವೈದ್ಯ: ಅಂಗಡಿಯೊಳಗೆ ಬುರುಡೆ ಡಾಕ್ಟರ್!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಕಾರವಾರ: ಆಸ್ಪತ್ರೆ ವೈದ್ಯರ ಟೇಬಲ್ ಮೇಲೆ ಸ್ಟೆತೊಸ್ಕೋಪ್, ಔಷಧಿ, ಚುಚ್ಚುಮದ್ದು ಸಾಮಗ್ರಿ, ತುರ್ತು ಚಿಕಿತ್ಸಾ ಸಲಕರಣೆ ಜೊತೆ ಚೀಟಿ-ಪೆನ್ನುಗಳಿರುವುದು ಸಾಮಾನ್ಯ. ಆದರೆ, ಕಾರವಾರದ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಟೇಬಲ್ ಮೇಲೆ ಮಾನವನ ತಲೆ ಬುರುಡೆ ಕಾಣುತ್ತದೆ!

ಒಂದು ಕಡೆ ಸೈಕಲ್, ಹಾಸಿಗೆಗಳ ಮೇಲೆ ಹರಡಿಕೊಂಡಿರುವ ಔಷಧಿ. ಅಲ್ಲಿರುವ ಟೇಬಲ್ ಮೇಲೆ ಸ್ಟೆತೊಸ್ಕೋಪ್, ಮಾತ್ರೆಗಳ ಜೊತೆ ಅಸ್ಥಿ ಪಂಜರದ ತಲೆ ಬುರುಡೆ. ಅಲ್ಲಿನ ವೈದ್ಯಾಧಿಕಾರಿ ಡಾ ಅವಿನಾಶ ಯಾವುದನ್ನು ಬೇಕಾದರೂ ಬಿಡಬಹುದು. ಆದರೆ, ತಮ್ಮ ಈ ಆಸ್ತಿಗಳನ್ನು ಅವರು ಎಂದಿಗೂ ಬಿಟ್ಟಿರಲಾರರು!

ADVERTISEMENT
ADVERTISEMENT
ಡಾ ಅವಿನಾಶ ವಿರುದ್ಧದ ದೂರು ಹಾಗೂ ಇಲಾಖೆ ನೀಡಿದ ನೋಟಿಸು

ಅಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಡಾ ಅವಿನಾಶ ನಾಯ್ಕ ಅವರು ಕೆಲಸ ಮಾಡುತ್ತಿದ್ದಾರೆ. ಕೆಲಸಕ್ಕೆ ಸರಿಯಾಗಿ ಹಾಜರಾಗದಿರುವುದು, ಸ್ವಚ್ಛತೆ ಕಾಪಾಡದಿರುವುದು, ಮೇಲಧಿಕಾರಿಗಳ ಜೊತೆ ಉದ್ದಟತನದ ವರ್ತನೆ, ಹಿರಿಯರಿಗೆ ಅಗೌರವ, ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಸೇರಿ ಅವರ ಮೇಲೆ ಸಾಕಷ್ಟು ಆರೋಪಗಳಿವೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನಿಖೆ ನಡೆಸಿ ನೋಟಿಸ್ ಸಹ ಜಾರಿ ಮಾಡಿದೆ. `ನಿಮ್ಮನ್ನು ಸೇವೆಯಿಂದ ವಜಾ ಮಾಡಲಾಗುವುದು’ ಎಂಬ ಎಚ್ಚರಿಕೆಯನ್ನು ಸಹ ನೀಡಿದೆ. ಆದರೂ ಡಾ. ಅವಿನಾಶ ನಾಯ್ಕ ಇದಕ್ಕೆ ಕಿಂಚಿತ್ತು ತಲೆಕೆಡಿಸಿಕೊಂಡಿಲ್ಲ!

ಇನ್ನೂ ಅಕ್ಟೊಬರ್ ತಿಂಗಳಿನಲ್ಲಿ ಅಂಗನವಾಡಿ ಸಹಾಯಕರ ಮೂಲಕ ನಡೆಯುವ ಆರೋಗ್ಯ ತಪಾಸಣಾ ಶಿಬಿರಕ್ಕೆ ಬರುವಂತೆ ಅವರಿಗೆ ವಾಹನ ಕಳುಹಿಸಿದರೂ ಅವರು ಹಾಜರಾಗಿಲ್ಲ. ಮೊದಲು ಶಿಬಿರಕ್ಕೆ ಹಾಜರಾದರೂ ರೋಗಿಗಳ ಮಾಹಿತಿ ಬಗ್ಗೆ ವರದಿ ಸಲ್ಲಿಸಿಲ್ಲ. ಮೇಲ್ವಿಚಾರಕರ ಫೋನ್ ನಂ ಸಹ ಅವರು ಬ್ಲಾಕ್ ಮಾಡಿಕೊಂಡಿದ್ದು, ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಹ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ಇದ್ಯಾವ ದೂರಿನ ಬಗ್ಗೆಯೂ ಡಾ ಅವಿನಾಶ ಅವರಿಗೆ ಚಿಂತೆ ಇಲ್ಲ!

Advertisement. Scroll to continue reading.

ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿಯೂ ಡಾ ಅವಿನಾಶ ನಾಯ್ಕ ಎಡವಿದ್ದಾರೆ. ಆಸ್ಪತ್ರೆಯ ಔಷಧಿಗಳನ್ನು ಮನೆಗೆ ಕೊಂಡೊಯ್ಯುವ ಆರೋಪ ಸಹ ಅವರ ಮೇಲಿದೆ. ಆದರೆ, ಇದನ್ನು ಪ್ರಶ್ನಿಸಿದ ಮೇಲಧಿಕಾರಿಗಳ ವಿರುದ್ಧ ಅವರು ಸಾಮಾಜಿಕ ಜಾಲತಾಣದಲ್ಲಿ ನಿಂದನಾರ್ಹ ಬರಹ ಪ್ರಕಟಿಸುತ್ತಿದ್ದಾರೆ. ಇನ್ನಷ್ಟು ಪ್ರಶ್ನಿಸಿದರೆ, `ನಿಮ್ಮ ವಿರುದ್ಧ ಲೋಕಾಯುಕ್ತ ತನಿಖೆ ಮಾಡಿಸುವೆ’ ಎಂದೂ ಬೆದರಿಸುವ ಬಗ್ಗೆ ಕೆಲವರು ಲಿಖಿತವಾಗಿ ದೂರಿದ್ದಾರೆ.

ವಾಟ್ಸಪ್ ಸ್ಟೇಟಸ್’ಲಿ ಮೇಲಧಿಕಾರಿಗಳ ವಿರುದ್ಧ ಡಾ ಅವಿನಾಶ ಬರೆದ ಬೈಗುಳ ಸಾಹಿತ್ಯ

ಡಾ ಅವಿನಾಶ ಅವರು ಅಚ್ಚುಕಟ್ಟಾಗಿ ಸಾಹಿತ್ಯ ಬರೆಯುತ್ತಾರೆ. ಕನ್ನಡ ಹಾಗೂ ಇಂಗ್ಲಿಷ್ ಪದಗಳಲ್ಲಿ ಅವರು ಮೇಲಧಿಕಾರಿಗಳನ್ನು ಅತ್ಯಂತ ಗೌರವಯುತವಾಗಿ ನಿಂದಿಸುತ್ತಾರೆ. ಅವರು ವಾಟ್ಸಪ್ ಸ್ಟೆಟಸ್ ಮೂಲಕ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡು ಬರೆಯುವುದು ಇಲಾಖೆ ಪಾಲಿಗೆ ದೊಡ್ಡ ತಲೆನೋವಾಗಿದೆ. ಊರಿನವರ ಪಾಲಿಗೆ ಅವರ ಬರಹಗಳೇ ದೊಡ್ಡ ಮನರಂಜನೆ!

Advertisement. Scroll to continue reading.

ಹಾಗoತ ಡಾ ಅವಿನಾಶ ತುಂಬ ಕೆಟ್ಟವರು ಎನ್ನುವ ಹಾಗಿಲ್ಲ. ಯಾವುದೇ ರೋಗಿ ತಡರಾತ್ರಿ ಬಂದರೂ ಡಾ ಅವಿನಾಶ ಬೇಸರಿಸಿಕೊಳ್ಳದೇ ಚಿಕಿತ್ಸೆ ನೀಡುತ್ತಾರೆ. ರೋಗಿಗಳ ಬಳಿ ಅವರು ಸೌಜನ್ಯದಿಂದಲೇ ವರ್ತಿಸುತ್ತಾರೆ. ರೋಗಿಗಳ ಮನದಾಳ ಅರಿತು ಔಷಧಿ ನೀಡುವಲ್ಲಿ ಅವರು ಪರಿಣಿತರು. `ಕೆಲ ವಿದ್ಯಾರ್ಥಿಗಳು-ಸಂಶೋಧನೆ ನಡೆಸುವವರು ಆಸ್ಪತ್ರೆಗೆ ಬರುತ್ತಾರೆ. ಹೀಗಾಗಿ ಅವರಿಗೆ ಮಾಹಿತಿ ನೀಡಲು ತಲೆ ಬುರುಡೆ ಜೊತೆ ಮಾನವನ ಅಸ್ಥಿ ಪಂಜರವನ್ನಿರಿಸಲಾಗುತ್ತದೆ’ ಎಂಬುದು ಕೆಲವರ ಅಭಿಪ್ರಾಯ. ಡಾ ಅವಿನಾಶ ಅವರ ಮೇಲಿನ ದೂರುಗಳ ಬಗ್ಗೆ ಅವರಿಂದಲೇ ಮಾಹಿತಿ ಪಡೆಯುವ ಪ್ರಯತ್ನ ನಡೆಯಿತು. ಆದರೆ, ಅವರ ಸಂಪರ್ಕ ಸಾಧ್ಯವಾಗಲಿಲ್ಲ.

 

ShareSendTweetShare
ADVERTISEMENT
Previous Post

ಮಹಿಳೆಯರ ಮೊಬೈಲ್ ಮೇಲೆ ರಹಸ್ಯ ಕಣ್ಣು!

Next Post

ದಕ್ಷ ಪೊಲೀಸ್’ಗೆ ದೊರೆತ ದಕ್ಷತಾ ಪದಕ

Next Post

ದಕ್ಷ ಪೊಲೀಸ್'ಗೆ ದೊರೆತ ದಕ್ಷತಾ ಪದಕ

ಹಬ್ಬದ ಖರೀದಿಗೆ ಹೋದವ ಕಣ್ಮರೆ

ದುಬಾರಿ ದುನಿಯಾ | ಅರಶಿನ ಎಲೆಗೆ 20ರೂ.. ಮೊಗೆಕಾಯಿಗೆ 50ರೂ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.