ಯಲ್ಲಾಪುರ: ಹೊಸಳ್ಳಿ ಸ್ನೇಹಿತ ಬಳಗದವರು ತಾವು ಕಲಿತ ಶಾಲೆಗೆ ಸ್ಪೀಕರ್ ಕೊಡುಗೆ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವದ ವೇಳೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಮಾಜಿ ವಿದ್ಯಾರ್ಥಿಗಳು ಅಲ್ಲಿನ ಮಕ್ಕಳ ಅನುಕೂಲಕ್ಕಾಗಿ ಮೈಕ್-ಸ್ಪೀಕರ್ ನೀಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಶೆಟ್ಟಿ ಅದನ್ನು ಸ್ವೀಕರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಗಾಯತ್ರಿ ಗದ್ದೆಮನೆ ಮಾಜಿ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಮಾಜಿ ವಿದ್ಯಾರ್ಥಿಗಳಾದ ಬಜ್ಜು ಪಟಕಾರೆ,ಮಾಂಬು ಜೊರೆ, ಮಾಂಬು ಪಟಕಾರೆ, ರಾಮು ಜಾನಕರ, ರಾಮು ಜಾನಕರ, ಮಾಬುಲಿ ಅತ್ತಾರ, ಗಂಗಾರಾಮ ಡೊಯಿಪೊಡೆ, ಜಾನು ಡೊಯಿಪೊಡೆ, ಪಾಂಡು ಡೊಯಿಪೊಡೆ, ವಿಠ್ಠು ಕೊಳಾಪಟೆ, ತುಕಾರಾಮ ಪಟಕಾರೆ, ತುಕಾರಾಮ ಎಡಗೆ, ಕೇಶವ ಕಾಂಬಳೆ, ದಾದು ಎಡಗೆ, ಉದಯ ಶಿಂಧೆ,ಮoಜುನಾಥ ಕೊರವರ,ಅಂಬ್ರು ಹುಂಬೆ, ರಾಮು ಬಾಜಾರಿ ಈ ವೇಳೆ ಇದ್ದರು.




