6
  • Latest

ವಕ್ಟ್ ವಿವಾದ | ಬಿಜೆಪಿ ಪ್ರತಿಭಟನೆಗೆ ಹಿಂದೂ ಸಂಘಟನೆಗಳ ಬೆಂಬಲ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ವಕ್ಟ್ ವಿವಾದ | ಬಿಜೆಪಿ ಪ್ರತಿಭಟನೆಗೆ ಹಿಂದೂ ಸಂಘಟನೆಗಳ ಬೆಂಬಲ

AchyutKumar by AchyutKumar
in ರಾಜ್ಯ

ಯಲ್ಲಾಪುರ: ರೈತರ ಭೂಮಿಯನ್ನು ವಕ್ಟ್ ಬೋರ್ಡ ಹೆಸರಿಗೆ ಬರೆದ ಸರ್ಕಾರದ ನಿಲುವು ಖಂಡಿಸಿ ನವೆಂಬರ್ 4ರಂದು ಬಿಜೆಪಿ ಪ್ರತಿಭಟನೆಗೆ ಕರೆ ನೀಡಿದೆ. ಈ ಪ್ರತಿಭಟನೆಗೆ ವಿವಿಧ ಹಿಂದೂ ಸಂಘಟನೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದೂತ್ವದ ರಕ್ಷಣೆಗೆ ಕಾಂಗ್ರೆಸ್-ಜೆಡಿಎಸ್ ಸೇರಿ ಯಾವುದೇ ಪಕ್ಷ ಹೋರಾಟ ನಡೆಸಿದರೂ ಅದಕ್ಕೆ ಬೆಂಬಲ ನೀಡುವುದಾಗಿ ಸಂಘಟನೆ ಪ್ರಮುಖರು ಘೋಷಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್,ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಕಿಸಾನ್ ಸಂಘ ಹಾಗೂ ಮಾತೃ ಮಂಡಳದವರು ಈ ಬಗ್ಗೆ ಭಾನುವಾರ ಶಕ್ತಿ ಗಣಪತಿ ದೇವಾಲಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದು, `ವಕ್ಟ್ ಬೋರ್ಡಿನಿಂದ ಮೊದಲು ಕೃಷಿ ಭೂಮಿಗಳ ಮೇಲೆ ಆಕ್ರಮಣ ನಡೆದಿದ್ದು, ಇದೀಗ ಮಠ ಮಾನ್ಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಹಿಂದೂಸ್ಥಾನವನ್ನು ಇಸ್ಲಾಮೀಕರಣ ಮಾಡುವ ಹುನ್ನಾರ ಇಲ್ಲಿ ಅಡಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ವಿಜಯಪುರ, ಯಾದಗಿರಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮಂಡ್ಯ ಸೇರಿ ರಾಜ್ಯದ ಹಲವು ಕಡೆ ಕೃಷಿಕರ ಹಾಗೂ ದೇವಾಲಯಗಳ ಭೂಮಿಯ ಮೇಲೆ ವಕ್ಟ ಬೋರ್ಡ ತನ್ನ ಹೆಸರು ದಾಖಲಿಸಿದೆ. 12ನೇ ಶತಮಾನದ ಹಿಂದೂ ದೇವಾಲಯದ ಮೇಲೆ ಸಹ ಹಕ್ಕು ಸಾಧಿಸಲು ಹೊರಟಿದೆ. ವಕ್ಟ್ ಬೋರ್ಡ ಅಸ್ತಿತ್ವವನ್ನು ಸರ್ಕಾರ ರದ್ದು ಮಾಡಬೇಕು’ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಆಗ್ರಹಿಸಿದರು.

`ಹಿಂದೂ ದೇವಾಲಯಗಳ ರಕ್ಷಣೆಗೆ ಸೂಕ್ತ ಕಾನೂನುಗಳಿಲ್ಲ. ದೇವಾಲಯ ನಿರ್ವಹಣೆ ಮಾತ್ರ ಸಮಿತಿಗೆ ನೀಡಲಾಗಿದ್ದು, ಅಭಿವೃದ್ಧಿಗೆ ಸರ್ಕಾರ ಅನುಮತಿ ಪಡೆಯಬೇಕು. ಆದರೆ, ವಕ್ಟ್ ಬೋರ್ಡಿಗೆ ಅದ್ಯಾವ ನಿಯಮಗಳು ಅನ್ವಯಿಸುವುದಿಲ್ಲ. ಈ ಬಗೆಯ ಕಾನೂನುಗಳಿಂದ ಹಿಂದೂಗಳ ಸಾಂಸ್ಕೃತಿಕ ಸ್ವತ್ತಿಗೆ ಧಕ್ಕೆಯಾಗುತ್ತಿದೆ’ ಎಂದು ವಿವರಿಸಿದರು.

`ಸಚಿವ ಜಮೀರ ಅಹ್ಮದ್ ಒತ್ತಡದಿಂದ ಜಿಲ್ಲಾಧಿಕಾರಿಗಳು ಬೇರೆಯವರ ಭೂಮಿಯನ್ನು ವಕ್ಟ್ ಬೋರ್ಡಿನ ಹೆಸರಿಗೆ ದಾಖಲು ಮಾಡುತ್ತಿದ್ದಾರೆ. ರೈತರ ಭೂಮಿಯಲ್ಲಿ ಅನ್ಯರ ಹೆಸರು ದಾಖಲಾಗಿರುವುದನ್ನು ಕೂಡಲೇ ತೆಗೆಯಬೇಕು’ ಎಂದು ಒತ್ತಾಯಿಸಿದರು. ವಿವಿಧ ಹಿಂದೂ ಸಂಘಟನೆ ಪ್ರಮುಖರಾದ ಗಜಾನನ ನಾಯ್ಕ, ಅನಂತ ಗಂವ್ಕರ, ಶ್ಯಾಮಲಿ ಪಾಠಣಕರ ಇತರರು ಇದ್ದರು.

ShareSendTweetShare
Previous Post

ಸಂಕಲ್ಪ ಉತ್ಸವ | ವೇದಿಕೆ ಒಂದು… ಕಾರ್ಯಕ್ರಮ ಐದು!

Next Post

ದುಡಿದು ತಿನ್ನುವವರಿಗೆ ಜೂಜಾಟದ ಚಟ!

Next Post

ದುಡಿದು ತಿನ್ನುವವರಿಗೆ ಜೂಜಾಟದ ಚಟ!

ಬಸ್ಸಿಗೆ ಗುದ್ದಿದ ಲಾರಿ | ನೋವಾದರೂ ಮೌನ ಮುರಿಯದ ನಾರಿಶಕ್ತಿ: ಬಾಲಕನ ನೆರವಿನಿಂದ ದೂರು ನೀಡಿದ ಚಾಲಕ!

DC interested in empowering Anganwadis: Nutritional treatment for malnourished children!

ಸ್ಥಳೀಯ ಸಂಸ್ಥೆ | ಅಂಕೋಲಾ-ಯಲ್ಲಾಪುರದಲ್ಲಿ ಮರು ಚುನಾವಣೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.