ಕುಮಟಾ: ಊಟಕ್ಕೆ ಕುಳಿತ ಪಾರ್ವತಿ ನಾಯ್ಕ ಎದೆನೋವಿನಿಂದ ಕುಸಿದು ಬಿದ್ದು ಸಾವನಪ್ಪಿದ್ದಾರೆ.
ಧಾರೇಶ್ವರದ ಕಡೆಕೊಡಿ ಗೋರೆಕ್ರಾಸ್ ಬಳಿ ಪಾರ್ವತಿ ತಿಮ್ಮಪ್ಪ ನಾಯ್ಕ (63 ಅವರು ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ 2 ಗಂಟೆ ಅವಧಿಯಲ್ಲಿ ಅವರು ಊಟಕ್ಕೆ ಕೂತಿದ್ದರು. ಆಗ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅಲ್ಲಿದ್ದ ಸೋಫಾ ಮೇಲೆ ಕುಳಿತರು.
ಎದೆನೋವು ಜಾಸ್ತಿ ಆಗಿದ್ದರಿಂದ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಿಕ್ಷಿಸಿದ ವೈದ್ಯರು `ಪಾರ್ವತಿ ನಾಯ್ಕ ಅವರು ಜೀವಂತವಾಗಿಲ್ಲ’ ಎಂದು ಖಚಿತಪಡಿಸಿದರು. ಬೆಂಗಳೂರಿನಲ್ಲಿ ವಾಸವಾಗಿರುವ ಪಾರ್ವತಿ ನಾಯ್ಕ ಅವರ ಮಗಳು ಅಕ್ಷತಾ ಪಾಂಡುರoಗ ನಾಯ್ಕ ಪೊಲೀಸ್ ದೂರು ನೀಡಿ, ಶವ ಪಡೆದಿದ್ದಾರೆ.



