ಭಟ್ಕಳ: ಕಾನೂನುಬಾಹಿರ ಮಟ್ಕಾ ಆಟದಲ್ಲಿಯೂ ಮೋಸ ಮಾಡುತ್ತಿದ್ದ ರವಿಶಂಕರ ನಾಯ್ಕ ಎಂಬಾತರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಶಿರಾಲಿ ಗುಡಿಹಿತ್ಲುವಿನ ರವಿಶಂಕರ್ ರಾಮಚಂದ್ರ ನಾಯ್ಕ (27) ಬುಧವಾರ ಮಾವಿನಕಟ್ಟಾದಿಂದ ಮುರುಡೇಶ್ವರ ಬಳಿಯ ರಸ್ತೆ ಪಕ್ಕ ಮಟ್ಕಾ ಆಡಿಸುತ್ತಿದ್ದ. ಎಲ್ಲಾ ಕಡೆ ಮಟ್ಕಾ ಆಡಿಸುವವರು `1 ರೂಪಾಯಿಗೆ 80 ರೂ ಕೊಡುವೆ’ ಎಂದು ಹೇಳಿ ಹಣ ಸಂಗ್ರಹಿಸಿದರೆ, ರವಿಶಂಕರ್ ನಾಯ್ಕ `1 ರೂಪಾಯಿಗೆ 70 ರೂ ಕೊಡುವೆ’ ಎಂದು ಹೇಳಿ ಹಣ ಸಂಗ್ರಹಿಸಿದ್ದ.
ಬೆಳಗ್ಗೆ 11 ಗಂಟೆ ವೇಳೆಗೆ ರವಿಶಂಕರ ನಾಯ್ಕ ಮೇಲೆ ಮುರುಡೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಹಣಮಂತ ಬೀರಾದರ ದಾಳಿ ನಡೆಸಿದರು. ಆಗ ಆತ ಜನರಿಂದ ಸಂಗ್ರಹಿಸಿದ್ದ 2340ರೂ ಸಿಕ್ಕಿದೆ. ಜೊತೆಗೆ ಮಟ್ಕಾ ಆಟಕ್ಕೆ ಬಳಸಿದ್ದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



