ಯಲ್ಲಾಪುರ: ಕಸಾಯಿಖಾನೆಗೆ ಸಾಗಿಸುತ್ತಿದ್ದ ಕೋಣ ಹಾಗೂ ಎತ್ತುಗಳನ್ನು ಪೊಲೀಸರು ಬಿಡಿಸಿದ್ದಾರೆ.
ಬೆಳಗಾವಿಯ ಯಮನಕರಡಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಒಟ್ಟು 12 ಜಾನುವಾರುಗಳಿಗೆ ಪೊಲೀಸರು ಬಿಡುಗಡೆ ಭಾಗ್ಯ ನೀಡಿದರು. ರಾಷ್ಟೀಯ ಹೆದ್ದಾರಿ ಮೂಲಕ ಈ ಪ್ರಮಾಣದಲ್ಲಿ ಜಾನುವಾರು ಸಾಗಾಟ ನಡೆಯುತ್ತಿದ್ದರೂ ದಾರಿ ನಡುವೆ ಸಿಗುವ ಯಾವ ಪೊಲೀಸರು ವಾಹನಕ್ಕೆ ಅಡ್ಡಲಾಗಿ ಕೈ ಮಾಡಿರಲಿಲ್ಲ. ಜೋಡಕೆರೆ ಬಳಿ ಲಾರಿ ನಿಲ್ಲಿಸಿದ ಪೊಲೀಸರು ಜಾನುವಾರುಗಳನ್ನು ಗೋ ಶಾಲೆಗೆ ರವಾನಿಸಿದರು.
ನ 12ರ ರಾತ್ರಿ 12 ಗಂಟೆ ವೇಳೆಗೆ ಪಿಎಸ್‌ಐ ಸಿದ್ದಪ್ಪ ಗುಡಿ ಜೋಡಕೆರೆ ಬಳಿ ಅಕ್ರಮ ಜಾನುವಾರು ಸಾಗಾಟದ ಲಾರಿ ತಡೆದರು. ಆಗ, ಮೈಸೂರಿನ ಸನ್ಮಾನ ಹಡಗಲಿ, ಮುಕ್ರಂ ಪಾಷಾ ಹಾಗೂ ಹಾಸನದ ಗಣೇಶ ಕಳೆಗೌಡ ಸಿಕ್ಕಿಬಿದ್ದರು. ಅವರ ಜೊತೆಯಿದ್ದ 2.20 ಲಕ್ಷ ರೂ ಮೌಲ್ಯದ ಜಾನುವಾರುಗಳನ್ನು ಪೊಲೀಸರು ಬದುಕಿಸಿದರು.




