ಕಾರವಾರ: ಬೈತಖೋಲ್ ಬಂದರಿನಲ್ಲಿ ಹೂಳೆತ್ತುವವರಿಗೆ 70 ಕೆಜಿ ಬಾರದ ಲೋಹ ಸಿಕ್ಕಿದೆ.
ಯಾಂತ್ರಿಕೃತ ಮೀನುಗಾರಿಕಾ ದೋಣಿಗೆ ಸಂಬoಧಿಸಿದ ಲೋಹ ಇದಾಗಿದ್ದು, ವಾರಸುದಾರರ ಪತ್ತೆಗೆ ಮಿನುಗಾರಿಕಾ ಇಲಾಖೆ ಹುಡುಕಾಟ ನಡೆಸಿದೆ. ಇಲ್ಲಿನ ಬೈತಖೋಲ್ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹೂಳು ತುಂಬಿದ್ದು, ಅದನ್ನು ಸ್ವಚ್ಛ ಮಾಡಲಾಗುತ್ತಿದೆ. ಹೀಗೆ ಹೂಳು ಮೇಲೆತ್ತುವಾಗ ಅದರ ಜೊತೆ ಪ್ರೊಪೆಲ್ಲರ್ ದೊರೆತಿದೆ. ದೊಡ್ಡ ದೊಡ್ಡ ದೋಣಿಗಳ ಹಿಂದೆ ಫ್ಯಾನ್ ಆಕಾರದಲ್ಲಿರುವ ವಸ್ತು ಇದಾಗಿದ್ದು, ಇದು ಬೈತಖೋಲ್ ಬಂದರು ಪ್ರದೇಶದಲ್ಲಿನ ದೋಣಿಗೆ ಸಂಬ0ಧಿಸಿದ್ದು ಎಂದು ಖಚಿತವಾಗಿದೆ.
ಪ್ರಸ್ತುತ ಆ ಪ್ರೊಪೆಲ್ಲರ್’ನ್ನು ಮೀನುಗಾರಿಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದು ವಾರಸುದಾರರಿಗೆ ಮುಟ್ಟಿಸುವ ಪ್ರಯತ್ನದಲ್ಲಿದ್ದಾರೆ. ಮೀನುಗಾರರೊಬ್ಬರು `ಇದು ತನ್ನ ಬೋಟಿನದು’ ಎಂದು ಅರ್ಜಿಯನ್ನು ಸಲ್ಲಿಸಿದ್ದಾರೆ. ಅದಾಗಿಯೂ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲಾ ದಾಖಲೆ ಪರಿಶೀಲನೆ ನಂತರ ಅದನ್ನು ವಾರಸುದಾರರಿಗೆ ಹಿಂತಿರುಗಿಸಲಾಗುತ್ತದೆ. ಬೇರೆ ಯಾರಾದರೂ ಪ್ರೊಪೆಲ್ಲರ್ ಕಳೆದುಕೊಂಡಿದ್ದರೆ ನ 30ರ ಒಳಗೆ ದಾಖಲೆ ಒದಗಿಸುವಂತೆ ಇಲಾಖೆ ಸೂಚಿಸಿದೆ.



