ಕಾರವಾರ: ಅಮದಳ್ಳಿಯಲ್ಲಿ ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.
ನ 13ರಂದು ಸಂಜೆ 6.30ರ ವೇಳೆಗೆ ಅಮದಳ್ಳಿಯ ರೋನಾಲ್ಡ ಫರ್ನಾಂಡಿಸ್ ಎಂಬಾತರು ಅಲೇಶ್ ಫರ್ನಾಂಡಿಸ್ ಎಂಬಾತರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಅಮದಳ್ಳಿ ಪಂಚಾಯತ ಕಡೆಯಿಂದ ಮೀನು ಮಾರುಕಟ್ಟೆ ಕಡೆ ಸಂಚರಿಸುತ್ತಿದ್ದ ಅವರು ಏಕಾಏಕಿ ಕಂತ್ರಿವಾಡ ಕಡೆ ತಿರುಗಿದರು.
ಸಾಯಿಕಿರಣ ಮಾಳ್ಸೇಕರ್ ಎಂಬಾತರು ಸುವರ್ಣ ಹರಿಕಂತ್ರ ಅವರನ್ನು ಕೂರಿಸಿಕೊಂಡು ಬರುತ್ತಿದ್ದ ಬೈಕು ರೋನಾಲ್ಡ್ ಅವರು ಓಡಿಸುತ್ತಿದ್ದ ಬೈಕಿಗೆ ಡಿಕ್ಕಿಯಾಯಿತು. ಎರಡು ಬೈಕಿನಲ್ಲಿದ್ದವರು ನೆಲಕ್ಕೆ ಬಿದ್ದರು. ಈ ಅಪಘಾತದಲ್ಲಿ ಸುವರ್ಣ ಕಾಲಿಗೆ ಪೆಟ್ಟಾಯಿತು. ಆಲೇಶ ಹಾಗೂ ಸಾಯಿಕಿರಣಗೆ ಸಹ ಗಾಯಗೊಂಡರು.
ಈ ಅಪಘಾತ ನೋಡಿದ ಅಲ್ಲಿನ ಆಟೋ ಚಾಲಕ ರೋಶನ್ ಫರ್ನಾಂಡಿಸ್ ಪೊಲೀಸ್ ದೂರು ನೀಡಿದ್ದಾರೆ.



