ಕಾರವಾರ: ಪರಿಸರ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಿಗಾಗಿ ಸೇವೆ ಸಲ್ಲಿಸುತ್ತಿರುವ ಕಾರವಾರದ ರೋಟರಿ ಕ್ಲಬ್ ಈ ವರ್ಷವೂ ನಿರುದ್ಯೋಗಿ ಮಹಿಳೆಯರ ಸ್ವಾವಲಂಬನೆಗಾಗಿ ಹೊಲಿಗೆ ಹಾಗೂ ಕಸೂತಿ ತರಬೇತಿ ಶಿಬಿರ ಆಯೋಜಿಸಿದೆ.
ಕಾರವಾರದ ರೋಟರಿ ಕ್ಲಬ್ ಟಿವಿ ರಿಪೇರಿ, ಮೊಬೈಲ್ ರಿಪೇರಿ, ಪ್ಲಂಬಿoಗ್, ಕೇಕ್ ಹಾಗೂ ಬೇಕರಿ ತಿನಿಸುಗಳ ತಯಾರಿಕೆಯ ಶಿಬಿರಗಳನ್ನು ನಡೆಸುತ್ತದೆ. ಇದರೊಂದಿಗೆ ಆರೋಗ್ಯ ಶಿಬಿರ, ಕೃತಕ ಕೈಕಾಲು ಜೋಡಣಾ ಶಿಬಿರವನ್ನು ಆಯೋಜಿಸುತ್ತದೆ. ರೈಲು ನಿಲ್ದಾಣಕ್ಕೆ ಅಗತ್ಯವಿರುವ ವಿಲ್‌ಚೇರ್ ನೀಡಲು ಸಹ ರೋಟರಿ ಕ್ಲಬ್ ಚಿಂತನೆ ನಡೆಸಿದೆ. ಇದರೊಂದಿಗೆ ಮೀನುಗಾರಿಕೆ ನಡೆಸುವ ಸ್ವ ಸಹಾಯ ಗುಂಪುಗಳಿಗೆ ರೋಟರಿ ಕ್ಲಬ್ ಆರ್ಥಿಕ ನೆರವನ್ನು ಸಹ ನೀಡುತ್ತಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬoಧಿಸಿ ಮಕ್ಕಳಿಗೆ ಕಂಪ್ಯುಟರ್ ವಿತರಣೆ, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಪ್ರಸ್ತುತ ಎಂ. ಜಿ. ರಸ್ತೆಯ ಏಲ್. ಐ. ಸಿ. ಕಚೇರಿ ಹತ್ತಿರವಿರುವ ರೋಟರಿ ಕ್ಲಬ್ಬಿನ ವೃತ್ತಿಪರ ತರಬೇತಿ ಕೇಂದ್ರದಲ್ಲಿ ಮಹಿಳೆಯರಿಗಾಗಿ 3 ತಿಂಗಳ ಹೊಲಿಗೆ ಹಾಗೂ ಕಸೂತಿ ತರಬೇತಿ ನಡೆಯಲಿದೆ. ನ 18ರ ಸೋಮವಾರದಿಂದ ಈ ಶಿಬಿರ ಶುರುವಾಗಲಿದೆ. 2025ರ ಫೆಬ್ರವರಿ 17ರವರೆಗೆ ನಿರಂತರವಾಗಿ ಶಿಬಿರ ನಡೆಸಿ ಹೊಲಿಗೆ ಹಾಗೂ ಕಸೂತಿ ವಿಷಯದಲ್ಲಿ ಮಹಿಳೆಯರನ್ನು ಸಂಪೂರ್ಣ ಸ್ವಾವಲಂಬಿಯನ್ನಾಗಿಸುವ ಉದ್ದೇಶ ರೋಟರಿ ಸಂಸ್ಥೆಯದ್ದಾಗಿದೆ. ಈ ತರಬೇತಿಯಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರವೂ ಸಿಗಲಿದೆ. ಈ ಶಿಬಿರದಲ್ಲಿ ನೀವು ಭಾಗವಹಿಸಲು ಇಲ್ಲಿ ಫೋನ್ ಮಾಡಿ: 9945958401, 8139911979, 9986773276.
ಸ್ವಾವಲಂಬಿಗಳಾಗಿ.. ಉತ್ತಮ ಬದುಕು ನಿಮ್ಮದಾಗಿಸಿಕೊಳ್ಳಿ!



