ಭಟ್ಕಳ: ಬಸ್ ನಿಲ್ದಾಣದ ಬಳಿ ಸಾರ್ವಜನಿಕರ ಗುಂಪು ರಚಿಸಿಕೊಂಡು 1 ರೂಪಾಯಿಗೆ 70ರೂ ನೀಡುವುದಾಗಿ ವಾಗ್ದಾನ ನೀಡುತ್ತಿದ್ದ ಭಾಸ್ಕರ್ ಬಿ ಎಸ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಮುಟ್ಟಳ್ಳಿಯ ಭಾಸ್ಕರ ಬಿ ಎಸ್ ಪುರಸಭೆ ಎದುರಿನ ಹಳೆ ಬಸ್ ನಿಲ್ದಾಣದ ಬಳಿ ಗೂಡಂಗಡಿ ಹೊಂದಿದ್ದು, ನ 19ರಂದು ಅಲ್ಲಿ ಒಂದಷ್ಟು ಜನರನ್ನು ಸೇರಿಸಿದ್ದ. 1 ರೂಪಾಯಿಗೆ 70ರೂ ನೀಡುವುದಾಗಿ ಷರತ್ತು ಹಾಕಿ ಅವರಿಂದ ಕಾಸು ಪಡೆಯುತ್ತಿದ್ದ.ಸಾಕಷ್ಟು ಸಾರ್ವಜನಿಕರನ್ನು ಆತ ಒಗ್ಗೂಡಿಸಿದ್ದ.
ಜನ ಗುಂಪಿನಲ್ಲಿರುವುದನ್ನು ನೋಡಿದ ಪೊಲೀಸ್ ಸಿಬ್ಬಂದಿ ಕಾಶಿನಾಥ ಕೊಟಗುನಸಿ ಅಲ್ಲಿ ಹೋಗಿ ನೋಡಿದಾಗ ಭಾಸ್ಕರನ ಮಟ್ಕಾ ಆಟ ಬೆಳಕಿಗೆ ಬಂದಿದೆ. ಪೊಲೀಸ್ ಠಾಣೆಗೆ ಓಡಿದ ಕಾಶಿನಾಥ್ ಅವರು ಮೇಲಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡಿದ್ದಾರೆ. ಪೊಲೀಸರು ದಾಳಿ ನಡೆಸಿದಾಗ ಭಾಸ್ಕರ ಬಳಿ ಮಟ್ಕಾ ಸಾಮಗ್ರಿಗಳ ಜೊತೆ 910ರೂ ಹಣವೂ ಸಿಕ್ಕಿದೆ. ಈ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.




