ಭಟ್ಕಳ: ಸೈಕಲ್ ಸವಾರ ನಾರಾಯಣ ನಾಯ್ಕ ಅವರಿಗೆ ರಿಕ್ಷಾ ಗುದ್ದಿದ ನಾರಾಯಣ ಜೋಗಿ ನೆಲಕ್ಕೆ ಬಿದ್ದ ಸೈಕಲ್ ಸವಾರನ ಮೇಲೆ ರಿಕ್ಷಾ ಹತ್ತಿಸಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಭಟ್ಕಳ ಮುಂಡಳ್ಳಿ ಡಿಪಿ ರಸ್ತೆಯ ನಾರಾಯಣ ದೇವಯ್ಯ ನಾಯ್ಕ ನ 21ರಂದು ಮುಂಡಳ್ಳಿ ಚರ್ಚ ಕಡೆಯಿಂದ ಮನೆಗೆ ಹೊರಟಿದ್ದರು. ವೇಗವಾಗಿ ಲಗೇಜ್ ರಿಕ್ಷಾ ಓಡಿಸಿಕೊಂಡು ಬಂದ ನಾರಾಯಣ ಜೋಗಿ ಚರ್ಚ ಸರ್ಕಲ್ ಬಳಿ ಸೈಕಲ್’ಗೆ ರಿಕ್ಷಾ ಗುದ್ದಿದರು.
ರಿಕ್ಷಾ ಗುದ್ದಿದ ರಭಸಕ್ಕೆ ಸೈಕಲ್ ಸವಾರ ನೆಲಕ್ಕೆ ಬಿದ್ದಿದ್ದು, ಆಗ ರಿಕ್ಷಾ ಸವಾರ ಸೈಕಲ್ ಸವಾರ ನಾರಾಯಣ ನಾಯ್ಕ ಅವರ ಕಾಲಿನ ಮೇಲೆ ರಿಕ್ಷಾ ಹಾಯಿಸಿದರು. ಇದರಿಂದ ಗಾಯಗೊಂಡ ನಾರಾಯಣ ನಾಯ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಿಕ್ಷಾ ಅಪಘಾತ ಮಾಡಿದ ನಾರಾಯಣ ಜೋಗಿ ಹೇರೂರು ಹಡಿಲ್ ಬಳಿಯ ಯಲ್ಲೋವೋಡಿಕಾವೂರು ಗ್ರಾಮದವರು. ಪೊಲೀಸರು ಅವರ ವಿರುದ್ಧ ತನಿಖೆ ಶುರು ಮಾಡಿದ್ದಾರೆ.