ಕಾರವಾರ: ನಿವೃತ್ತ ಸರ್ಕಾರಿ ನೌಕರ ವಿಷ್ಣು ರಾಣೆ ಅವರ ಬೈಕ್ ಕಳ್ಳತನವಾಗಿದೆ.
ನಂದನಗದ್ದಾದ ಟೀಚರ್ಸ ಕಾಲೋನಿಯ ವಿಷ್ಣು ವಿಶ್ವನಾಥ ರಾಣೆ (66) ಅವರು ನ 21ರಂದು ಬೆಳಗ್ಗೆ 11 ಗಂಟೆಗೆ ಕಾರವಾರ ಬಸ್ ನಿಲ್ದಾಣದ ಹಿಂದೆ ತಮ್ಮ ಬೈಕ್ ನಿಲ್ಲಿಸಿದ್ದರು. ರಾತ್ರಿ 9.30ರ ವೇಳೆಗೆ ಅಲ್ಲಿ ಬಂದು ನೋಡಿದಾಗ ಬೈಕ್ ಇರಲಿಲ್ಲ.
ರಾತ್ರಿಯಿಡೀ ಅವರು ಅಲ್ಲಿ-ಇಲ್ಲಿ ಬೈಕ್ ಹುಡುಕಾಟ ನಡೆಸಿದರು. ಬೈಕ್ ಕಳ್ಳತನವಾದ ಕಾರಣ ಮನೆಗೆ ತೆರಳಲು ಅವರು ಸಮಸ್ಯೆ ಅನುಭವಿಸಿದರು. ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಬೈಕ್ ಬಗ್ಗೆ ಮಾಹಿತಿ ಸಿಗಲಿಲ್ಲ. ಪರಿಚಯಸ್ಥರೆಲ್ಲ ಸೇರಿ ಹುಡುಕಿದರೂ ಬೈಕಿನ ಸುಳಿವು ಗೊತ್ತಾಗಲಿಲ್ಲ.
ಈ ಹಿನ್ನಲೆ ಅವರು ತಮ್ಮ ಹೀರೋ ಹೊಂಡಾ ಸ್ಪೆಡ್ಲರ್ ಪ್ಲಸ್ ಬೈಕ್ ಕಳ್ಳತನ ನಡೆದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಸಹ ಅವರ ಬೈಕನ್ನು ಹುಡುಕಿಕೊಡುವ ಭರವಸೆ ನೀಡಿದ್ದಾರೆ.



