ಹೊನ್ನಾವರ: ಬೈಕಿನಲ್ಲಿ ಸಂಚರಿಸುತ್ತಿದ್ದವರಿಗೆ ಕೆಎಸ್‌ಆರ್‌ಟಿಸಿ ಬಸ್ಸು ಗುದ್ದಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.
ಶನಿವಾರ ಬೆಳಗ್ಗೆ ಮಂಕಿಯ ಉದಯ ಮಾಬ್ಲು ನಾಯ್ಕ ಹಾಗೂ ವಿಜಯಾ ಉದಯ ನಾಯ್ಕ ರಾಷ್ಟ್ರೀಯ ಹೆದ್ದಾರಿ ಮೂಲಕ ಬೈಕಿನಲ್ಲಿ ಸಂಚರಿಸುತ್ತಿದ್ದರು. ಭಟ್ಕಳ-ಹೊನ್ನಾವರ ಮಾರ್ಗದಲ್ಲಿ ವೇಗವಾಗಿ ಬಸ್ಸು ಓಡಿಸಿಕೊಂಡು ಬಂದ ನಾಗರಾಜ ಹನುಮಂತ ನಾಯ್ಕ ಬೈಕಿಗೆ ತಮ್ಮ ಗುದ್ದಿದರು.
ಬಸ್ಸು ಗುದ್ದಿದ ರಭಸಕ್ಕೆ ಬೈಕಿನಲ್ಲಿದ್ದವರು ನೆಲಕ್ಕೆ ಅಪ್ಪಳಿಸಿದರು. ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡರು. ಬೈಕ್ ಸವಾರರಿಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಮಂಕಿಯ ಆಟೋ ಚಾಲಕ ನಾಗರಾಜ ನಾಯ್ಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದರು.