ಕುಮಟಾ: ಕೊಂಕಣ ರೈಲ್ವೆ ಪ್ರಯಾಣಿಕರ ಮೊಬೈಲ್ ಹಾಗೂ ಹಣ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ. ಕುಮಟಾ – ಅಂಕೋಲಾ ನಡುವಿನ ಭಾಗದಲ್ಲಿಯೇ ಅನೇಕರು ತಮ್ಮ ಸಾಮಗ್ರಿಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಮಂಗಲ ಲಕ್ಷದ್ವೀಪ ರೈಲಿನಲ್ಲಿ ಸಂಚರಿಸುತ್ತಿದ್ದ ಕೇರಳದ ಕೃಪೇಶ ಕೆಪಿ ಸಹ ತಮ್ಮ ಮೊಬೈಲ್ ಕಳೆದುಕೊಂಡಿದ್ದಾರೆ. ಅಕ್ಟೊಬರ್ 10ರಂದು ಅವರು ರೈಲಿನಲ್ಲಿ ಸಂಚರಿಸುತ್ತಿದ್ದಾಗ ಕಳ್ಳರು ಕೈ ಚಳಕ ಪ್ರದರ್ಶಿಸಿದ್ದಾರೆ. ಈ ಬಗ್ಗೆ ಅವರು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದು, ಆ ದೂರು ಇದೀಗ ಜಿಲ್ಲಾ ಪೊಲೀಸರಿಗೆ ವರ್ಗವಾಗಿದೆ. ಪೊಲೀಸರು ಮೊಬೈಲ್ ಹುಡುಕಾಟ ನಡೆಸಿದ್ದಾರೆ.




