ದಾಂಡೇಲಿ: ಇಲ್ಲಿನ ಸರಕಾರಿ ಮರಮುಟ್ಟುಗಳ ಕೋಠಿಯಲ್ಲಿ ನವೆಂಬರ್ 27ರಿಂದ 29 ರವರೆಗೆ ವಿವಿಧ ನಾಟಾಗಳ ಇ-ಹರಾಜು ಪ್ರಕ್ರಿಯೆ ನಡೆಯಲಿದೆ.
ವಿವಿಧ ಸೆಷನ್’ಗಳಲ್ಲಿ ಆನ್‌ಲೈನ್‌ಗಳ ಮುಖಾಂತರ ಈ ಪ್ರಕ್ರಿಯೆ ನಡೆಯಲಿದ್ದು ಉತ್ತಮ ದರ್ಜೆಯ ವಿಶೇಷ ಜಾತಿಯ ಸಾಗವಾನಿ, ಬೀಟೆ, ಹೊನ್ನೆ, ಕಲಮುತ್ತಲ್, ನಂದಿ, ಮತ್ತಿ, ಅಕೇಶಿಯಾ ಹಾಗೂ ವಿವಿಧ ಜಾತಿಯ ನಾಟಾಗಳು ಮಾರಾಟಕ್ಕಿವೆ.
ಸಾರ್ವಜನಿಕರು, ರೈತರು, ಉದ್ಯಮಿದಾರರು ಇ ಪೋರ್ಟಲ್ ಮೂಲಕ ನೊಂದಾಯಿಸಿಕೊoಡು ಇದನ್ನು ಖರೀದಿಸಬಹುದಾಗಿದೆ.




