ಯಲ್ಲಾಪುರ: ಸಬಗೇರಿ ಶಾಲೆಯಿಂದ 100 ಮೀ ಅಂತರದೊಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಪಾನ್ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಇದರೊಂದಿಗೆ ಪಟ್ಟಣದ ಹಲವು ಭಾಗದಲ್ಲಿ ನಿಯಮ ಮೀರಿ ತಂಬಾಕು ಮಾರಾಟ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದರು.
ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುನಿಲ್ ಗಾವಡೆ, ಪೊಲೀಸ್ ಉಪನಿರೀಕ್ಷಕಿ ನಸ್ರೀನ ತಾಜ್ ತಂಡ ಕಟ್ಟಿಕೊಂಡು ದಾಳಿ ನಡೆಸಿದರು. ಗೂಡಗಂಡಿಕಾರರ ಮೇಲೆ 16 ಪ್ರಕರಣಗಳನ್ನು ದಾಖಲಿಸಿದ ಅಧಿಕಾರಿಗಳು 8400ರೂ ದಂಡವನ್ನು ವಸೂಲಿ ಮಾಡಿದರು. ನಂದೋಳ್ಳಿ ಆಡಳಿತ ವೈದ್ಯಾಧಿಕಾರಿ ಡಾ ತೇಜೇಶ್ ತಂಬಾಕು ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿದರು.
`ತಂಬಾಕು ಸೇವನೆ ಮಾಡುವುದರಿಂದ ಶ್ವಾಸಕೋಶ ಕಾನ್ಸರ, ಕೂದಲು ಉದರುವಿಕೆ, ಕಿವುಡುತನ, ಹೃದಯ ಸಂಬAಧಿ ಕಾಯ¯, ಗರ್ಭಕೋರಳಿನ ಕಾನ್ಸರ್ ಉಂಟಾಗುತ್ತದೆ. ಹೀಗಾಗಿ ತಂಬಾಕು ಹಾಗೂ ಸಿಗರೇಟಿನಿಂದ ಹೊರಬನ್ನಿ’ ಎಂದು ಅಧಿಕಾರಿಗಳು ಕರೆ ನೀಡಿದರು.



