ದಾಂಡೇಲಿ: ಸೆಂಟ್ರಿoಗ್ ಕೆಲಸ ಮಾಡುವ ಸಾಹಿಲ್ ನಮಾಜ್ ಮಾಡಲು ತೆರಳುತ್ತಿದ್ದಾಗ ಅಡ್ಡಗಟ್ಟಿದ ಇಬ್ಬರು ಕಬ್ಬಿಣದ ರಾಡು, ಇಟ್ಟಿಗೆಯಿಂದ ಹೊಡೆದು ಗಾಯ ಮಾಡಿದ್ದಾರೆ.
ಗಾಂಧೀನಗರದ ಸಾಹಿಲ್ ಮನೀರ ಅಹ್ಮದ ಕೆಕ್ಕೇರಿ ನ 29ರಂದು ನಮಾಜ್ ಮಾಡಲು ಮಸೀದಿಗೆ ಹೋಗುತ್ತಿದ್ದರು. ಆಗ ಸುಹೇಲ ಜಾಫರ ತೆರಗಾಂವ್ ಅವರನ್ನು ಅಡ್ಡಗಟ್ಟಿ ಬೈದರು. ಈ ಬಗ್ಗೆ ಪ್ರಶ್ನಿಸಿದಾಗ ಕಪಾಳ ಮೋಕ್ಷ ಮಾಡಿ ಹೊರಟರು.
ಮುಂದಿನ ರಸ್ತೆಯಲ್ಲಿ ಸುಹೇಲರ ತಂದೆ ಜಾಫರ ತೆರಗಾಂವ್ ಕಾಯುತ್ತಿದ್ದು, ಜಾಫರ್ ಸಹ ಸಾಹಿಲ್ ಕೆಕ್ಕೇರಿ ಮೇಲೆ ಆಕ್ರಮಣ ಮಾಡಿದರು. ಸಾಹಿಲರ ಕೂದಲು ಹಿಡಿದು ತಲೆ ಬಗ್ಗಿಸಿ ಬೆನ್ನ ಮೇಲೆ ಗುದ್ದಿದರು.
ಈ ವೇಳೆ ಅಲ್ಲಿಗೆ ಬಂದ ಸುಹೇಲ್, ಸಾಹಿಲ್’ಗೆ ಕಬ್ಬಿಣದ ರಾಡಿನಿಂದ ಹೊಡೆದರು. ಆಗ ಜಾಫರ್ ಸಹ ಅಲ್ಲಿದ್ದ ಇಟ್ಟಿಗೆಯನ್ನು ಮೈಮೇಲೆ ಎಸೆದು ಗಾಯಗೊಳಿಸಿದರು. ಈ ಎಲ್ಲಾ ಘಟನೆಗಳ ಬಗ್ಗೆ ಸಾಹಿಲ್ ಪೊಲೀಸ್ ದೂರು ನೀಡಿದ್ದಾರೆ.