ಯಲ್ಲಾಪುರ: ಹಣಕಾಸು ವಿಷಯಕ್ಕೆ ಸಂಬoಧಿಸಿ ನೂತನ ನಗರದಲ್ಲಿ ಇಬ್ಬರ ನಡುವೆ ಹೊಡೆದಾಟ ನಡೆದಿದೆ.
ನೂತನ ನಗರದ ಚಾಲಕ ವಿಶ್ವನಾಥ ಮಳ್ಳೂರಿ ಹಾಗೂ ಅದೆ ಭಾಗದ ಸುಭಾಷ ಸಾವಂತ ನಡುವೆ ವೈಮನಸ್ಸು ಉಂಟಾಗಿದೆ. ಗೌಂಡಿ ಕೆಲಸ ಮಾಡುವ ಸುಭಾಷ ಸಾವಂತ ಬಳಿ ವಿಶ್ವನಾಥ ಮಳ್ಳೂರಿ ಕೈಗಡ ಸಾಲ ಪಡೆದಿದ್ದು, ಸಾಲ ಮರಳಿಸುವಂತೆ ಕೇಳಿದಕ್ಕಾಗಿ ವಿಶ್ವನಾಥ ಚಾಕು ಇರಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ನ 29ರಂದು ವಿಶ್ವನಾಥ ಮಳ್ಳೂರಿ ಅವರ ಮನೆಗೆ ಹೋದ ಸುಭಾಷ ಸಾವಂತ `ತನ್ನ ಹಣ ತನಗೆ ಮರಳಿಸು’ ಎಂದು ಕೇಳಿಕೊಂಡಿದ್ದಾರೆ. ಆಗ ಸಿಟ್ಟಾದ ವಿಶ್ವನಾಥ ಮಳ್ಳೂರಿ ಮನೆ ಒಳಗಿದ್ದ ಚಾಕು ತಂದು ಹೊಟ್ಟೆಗೆ ಇರಿಯಲು ಯತ್ನಿಸಿದ್ದು, ಸುಭಾಷ ಬಗ್ಗಿದ ಪರಿಣಾಮ ಹೆಗಲಿಗೆ ಚಾಕು ತಾಗಿದೆ.
ಗಾಯಗೊಂಡ ಸುಭಾಷ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪಿಎಸ್‌ಐ ಶೇಡಜಿ ಚೌಹ್ವಾಣ್ ತನಿಖೆ ನಡೆಸುತ್ತಿದ್ದಾರೆ.