ಮುಂಡಗೋಡ: ಹೊಲಕ್ಕೆ ಹೊರಟ ಮಹಿಳೆಯರ ಮೇಲೆ ಜೇನು ಹುಳುಗಳು ದಾಳಿ ನಡೆಸಿದೆ. ಜೇನು ದಾಳಿಯಿಂದ ತತ್ತರಿಸಿದ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ಬೆಳಗ್ಗೆ ಐದು ಮಹಿಳೆಯರ ತಂಡ ಇಂದೂರಿಗೆ ಹೊರಟಿತ್ತು. ಅಲ್ಲಿನ ಗದ್ದೆಗೆ ತೆರಳುತ್ತಿದ್ದಾಗ ಜೇನು ಹುಳಗಳು ಮಹಿಳೆಯರನ್ನು ಮುತ್ತಿಕ್ಕಿದವು. ನೋವು ತಾಳಲಾರದ ಮಹಿಳೆಯರು ಸಾಕಷ್ಟು ಬೊಬ್ಬೆ ಹೊಡೆದಿದ್ದು, ಅಕ್ಕಪಕ್ಕದ ಜನ ಅವರನ್ನು ಅಲ್ಲಿದ ದೂರ ಕರೆದುಕೊಂಡು ಹೋಗಿ ರಕ್ಷಿಸಿದರು.
ಅದಾಗಿಯೂ ಸಾಕಷ್ಟು ಜೇನು ಹುಳು ದಾಳಿ ನಡೆಸಿದ ಕಾರಣ ಕೈ-ಮೈ ಉಬ್ಬಿಸಿಕೊಂಡ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಔಷಧಿ ನೀಡಿ ಅವರ ಆರೈಕೆ ಮಾಡಿದ್ದಾರೆ.




