ಶಿರಸಿ: ಅಡಿಕೆ ವಕಾರಿ ಮೇಲೆ ದಾಳಿ ನಡೆಸಿದ ಕಳ್ಳರು ಅಲ್ಲಿದ್ದ 10 ಕ್ವಿಂಟಲ್ ಅಡಿಕೆ ದೋಚಿ ಪರಾರಿಯಾಗಿದ್ದಾರೆ.
ಹುಬ್ಬಳ್ಳಿ ರಸ್ತೆಯ ಗಾಳಿ ಮಾಸ್ತಿ ದೇವಸ್ಥಾನ ಹತ್ತಿರ ಅಬ್ದುಲ್ ಬೇಸಾನಿಯಾ ಅವರು ಅಡಿಕೆ ವಕಾರಿ ನಡೆಸುತ್ತಿದ್ದರು. ಅನೀಸ ಸತ್ತಾರ್ ಬೇಸಾನಿಯಾ & ಕಂಪನಿ ಅಡಿಕೆ ವಕಾರಿಯಲ್ಲಿ ಅಡಿಕೆ ದಾಸ್ತಾನು ಇರುವುದನ್ನು ಕಳ್ಳರು ಗಮನಿಸಿದ್ದರು.
ನ 28ರ ರಾತ್ರಿ ಅಬ್ದುಲ್ ಅವರು ಅಡಿಕೆ ವಕಾರಿಯ 2 ಬಾಗಿಲು ಹಾಕಿ ಮನೆಗೆ ಹೋಗಿದ್ದರು. ಮರುದಿನ ಬೆಳಗ್ಗೆ ಬಂದು ನೋಡಿದಾಗ ಅಡಿಕೆ ವಕಾರಿಯ ಶಟರ್ ಒಡೆದಿತ್ತು. ಒಳಗೆ ಹೋಗಿ ಪರಿಶೀಲಿಸಿದಾಗ 15 ಚೀಲಗಳಲ್ಲಿದ್ದ ಚಾಲಿ ಅಡಿಕೆ ಕಾಣೆಯಾಗಿತ್ತು. 4 ಲಕ್ಷ ರೂ ಮೌಲ್ಯದ 10 ಕ್ವಿಂಟಲ್ ಚಾಲಿ ಅಡಿಕೆ ಕಾಣೆ ಆಗಿರುವುದನ್ನು ಅರಿತ ಅಬ್ದುಲ್ ಪೊಲೀಸ್ ದೂರು ನೀಡಿದ್ದಾರೆ.




