ಕಾರವಾರ: ಮರದ ನೆರಳಿನಲ್ಲಿ ನಿಂತಿದ್ದ ಕಾರಿಗೆ ಹಠಾತ್ ಬೆಂಕಿ ತಾಗಿದ್ದು, ಕಾರು ಹೊತ್ತಿ ಉರಿದಿದೆ.
ವಿಲಾಸ್ ಅಣ್ವೇಕರ್ ಅವರು ಪೊಲೀಸ್ ಕ್ವಾಟರ್ಸ ಬಳಿ ಕಾರು ನಿಲ್ಲಿಸಿದ್ದರು. ಮರದ ನೆರಳಿನಲ್ಲಿ ತುಂಪು ಕಂಡ ಕಾರಣ ಅಲ್ಲಿಯೇ ಕಾರು ಬಿಟ್ಟಿದ್ದರು. ಗುರುವಾರ ದಿಢೀರ್ ಆಗಿ ಕಾರಿಗೆ ಬೆಂಕಿ ತಗುಲಿದೆ. ಕ್ಷಣ ಮಾತ್ರದಲ್ಲಿಯೇ ಕಾರು ಹೊತ್ತಿ ಉರಿದಿದೆ.
ಕಾರಿನಿಂದ ಹೊಗೆ ಆಡುತ್ತಿರುವುದನ್ನು ನೋಡಿದ ಜನ ಅಗ್ನಿಶಾಮಕದಳಕ್ಕೆ ಫೋನ್ ಮಾಡಿದರು. ಅಗ್ನಿಶಾಮಕ ಸಿಬ್ಬಂದಿ ಕಾರಿಗೆ ತಗುಲಿದ ಬೆಂಕಿ ಆರಿಸುವ ಪ್ರಯತ್ನ ಮಾಡಿದರು. ಅದಾಗಿಯೂ ಕಾರು ಭಾಗಷ: ಸುಟ್ಟು ಕರಕಲಾಗಿದೆ.
ಈ ಅಗ್ನಿ ಅವಘಡಕ್ಕೆ ಕಾರಣ ಗೊತ್ತಾಗಲಿಲ್ಲ.




