ಯಲ್ಲಾಪುರ: ಶುಕ್ರವಾರ ಸಂಜೆಯ ಗುಡುಗು-ಸಿಡಿಲಿನ ಅಬ್ಬರಕ್ಕೆ ಹರೀಶ ಸಿದ್ದಿ ಸಾವನಪ್ಪಿದ್ದಾರೆ.
ನಂದೂಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಗೋಡು ಬಾಳೆಗದ್ದೆ ಸಮೀಪದ ಹೆಗ್ಗುಂಬಳಿಯ ಹರೀಶ ಅರ್ಜುನ ಸಿದ್ದಿ (27) ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಶುಕ್ರವಾರ ಸಂಜೆ 7.50ರ ಆಸುಪಾಸಿಗೆ ಅವರುಉ ತಮ್ಮ ಮನೆ ಹೊರಭಾಗ ಮೊಬೈಲ್ ನೋಡುತ್ತ ನಿಂತಿದ್ದರು.
ಆ ವೇಳೆ ಜೋರಾಗಿ ಗುಡುಗುಸಹಿತ ಮಳೆ ಶುರುವಾಗಿದ್ದು, ಒಮ್ಮೆಲೆ ಅಬ್ಬರಿಸಿದ ಸಿಡಿಲಿನಿಂದ ಅವರು ನೆಲಕ್ಕೆ ಬಿದ್ದರು. ಹರೀಶ ಸಿದ್ದಿ ಅವರನ್ನು ತಾಯಿ ಮಂಗಲಾ ಸಿದ್ದಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ತಪಾಸಣೆ ನಡೆಸಿದ ವೈದ್ಯರು ಹರೀಶ ಸಿದ್ದಿ ಈಗಾಗಲೇ ಸಾವನಪ್ಪಿರುವ ಬಗ್ಗೆ ಘೋಷಿಸಿದರು. ಕುಟುಂಬದವರು ಪೊಲೀಸ್ ಪ್ರಕರಣ ದಾಖಲಿಸಿ ಅವರ ಶವ ಪಡೆದರು.




