ಸಿದ್ದಾಪುರ: ತಾಲೂಕಾ ಆಸ್ಪತ್ರೆಯ ವೈದ್ಯ ಡಾ ರವಿರಾಜ ಶೇಟ್ ಅವರ ಕಾರಿಗೆ ಬೈಕ್ ಡಿಕ್ಕಿಯಾಗಿದೆ. ಬೈಕ್ ಸವಾರ ಗಾಯಗೊಂಡು ಆಸ್ಪತ್ರೆ ಸೇರಿದ್ದು, ಆತನ ವಿರುದ್ಧ ಡಾ ರವಿರಾಜ ಶೇಟ್ ಪೊಲೀಸ್ ದೂರು ನೀಡಿದ್ದಾರೆ.
ಡಿಸೆಂಬರ್ 6ರ ಮಧ್ಯಾಹ್ನ ಡಾ ರವಿವಾರ ಶೇಟ್ ಅವರು ತಮ್ಮ ಕಾರಿನಲ್ಲಿ ಸಿದ್ದಾಪುರದಿಂದ ಕಾರವಾರಕ್ಕೆ ಹೊರಟಿದ್ದರು. ತಾವು ವಾಸವಾಗಿರುವ ತಾಲೂಕು ಆಸ್ಪತ್ರೆಯ ಕ್ವಾಟರ್ಸಿನಿಂದ ಅವರು ಸಿದ್ದಾಪುರ-ಕುಮಟಾ ಮಾರ್ಗವಾಗಿ ಸಂಚರಿಸುತ್ತಿದ್ದರು. ಹಿಂದಿನಿoದ ಬೈಕ್ ಓಡಿಸಿಕೊಂಡು ಬಂದ ಹೊನ್ನಗೋಡುವಿನ ದಾಮೋಧರ ಗೌಡ ಎಡಭಾಗದಿಂದ ಕಾರನ್ನು ಓವರ್ ಟೆಕ್ ಮಾಡಲು ಪ್ರಯತ್ನಿಸಿದರು.
ಬೈಕು ನಿಯಂತ್ರಣ ತಪ್ಪಿದ ಪರಿಣಾಮ ಕಾರಿನ ಎಡಭಾಗಕ್ಕೆ ದಾಮೋಧರ ಗೌಡ ತಮ್ಮ ಬೈಕು ಗುದ್ದಿದರು. ಪರಿಣಾಮ ಬೈಕಿನಲ್ಲಿದ್ದ ದಾಮೋಧರ ಗೌಡ ನೆಲಕ್ಕೆ ಹಾರಿ ಬಿದ್ದು ಪೆಟ್ಟು ಮಾಡಿಕೊಂಡರು. ತುಟಿ, ಬುಜಕ್ಕೆ ಪೆಟ್ಟು ಮಾಡಿಕೊಂಡ ದಾಮೋಧರ ಗೌಡರ ತಲೆಗೆ ಸಹ ಗಾಯವಾಗಿದೆ. ಹೀಗಾಗಿ ಅವರು ಆಸ್ಪತ್ರೆ ಸೇರಿದ್ದು, ಬೈಕ್ ಸವಾರನ ಅತಿ ವೇಗದ ಬಗ್ಗೆ ಡಾ ರವಿರಾಜ ಶೇಟ್ ಪೊಲೀಸ್ ದೂರು ನೀಡಿದ್ದಾರೆ.




