ಕುಮಟಾ ಹಾಗೂ ಅಂಕೋಲಾದಲ್ಲಿ ಮಟ್ಕಾ ಆಡಿಸುತ್ತಿದ್ದವರ ಮೇಲೆ ಮಹಿಳಾ ಪೊಲೀಸರು ದಾಳಿ ನಡೆಸಿದ್ದಾರೆ. ಕುಮಟಾ ಪಿಎಸ್‌ಐ ಸಾವಿತ್ರಿ ನಾಯಕ ಹಾಗೂ ಅಂಕೋಲಾ ಪಿಎಸ್‌ಐ ಜಯಶ್ರೀ ಪ್ರಭಾಕರ ಸೇರಿ ಮೂವರ ಹೆಡೆಮುರಿ ಕಟ್ಟಿದ್ದಾರೆ.
ಕುಮಟಾದ ದಿವಿಗಿ ಚಿಪ್ಪನಹಕ್ಕಲದ ದಿನೇಶ ದೇಶಭಂಡಾರಿ ದಿವಿಗಿ ಕ್ರಾಸಿನಲ್ಲಿ ಮಟ್ಕಾ ಆಡಿಸುತ್ತಿದ್ದರು. ಅಲ್ಲಿ ಗೂಡಂಗಡಿ ನಡೆಸುವ ದಿನೇಶ ದೇಶಭಂಡಾರಿ ಜನರಿಗೆ ಆಮೀಷ ಒಡ್ಡಿ ಹಣ ಸಂಗ್ರಹಿಸಿದ್ದರು. ಡಿ 12ರಂದು ಈ ವಿಷಯ ಅರಿತ ಪಿಎಸ್‌ಐ ಸಾವಿತ್ರಿ ನಾಯಕ ತಮ್ಮ ತಂಡದೊAದಿಗೆ ದಾಳಿ ಮಾಡಿದರು. ಮಟ್ಕಾ ಆಟಕ್ಕಾಗಿ ಸಂಗ್ರಹಿಸಿದ್ದ 650ರೂ ಹಣದ ಜೊತೆ ಜೂಜಾಟದ ಪರಿಕ್ಕರಗಳನ್ನು ವಶಕ್ಕೆ ಪಡೆದರು.
ಅಂಕೋಲಾದ ಕಂತ್ರಿಯ ರಾಮಕೃಷ್ಣ ನಾಯ್ಕ ಸಹ ಶಾಂತಿಕಾ ಫೈನಾನ್ಸ ಪಕ್ಕದ ರಸ್ತೆಯಲ್ಲಿ ನಿಂತು ಮಟ್ಕಾ ಆಡಿಸುತ್ತಿದ್ದರು. ಇದನ್ನು ಅರಿತ ಪಿಎಸ್‌ಐ ಜಯಶ್ರೀ ಪ್ರಭಾಕರ ಅವರನ್ನು ತಪಾಸಣೆಗೆ ಒಳಪಡಿಸಿದರು. ಆಗ ಮಟ್ಕಾ ಆಟದಿಂದ ಸಂಗ್ರಹಿಸಿದ 2900ರೂ ಹಾಗೂ ಮಟ್ಕಾ ಸಂಖ್ಯೆ ಬರೆದುಕೊಳ್ಳುವ ಚೀಟಿಗಳು ಸಿಕ್ಕಿದವು. ಅವೆಲ್ಲವನ್ನು ಪೊಲೀಸರು ವಶಕ್ಕೆ ಪಡೆದರು.
ಅಂಕೋಲಾ ಕೊಡಸಣಿಯ ಮಾಣಿ ಗೌಡ ಸಹ ಕೊಡಸಣಿ ಗ್ರಾಮದ ನಾಗೇಶ ಗೌಡರ ಹೊಟೇಲ್ ಎದುರು ಕಾಸು ಎಣಿಸುತ್ತಿದ್ದರು. ಅಲ್ಲಿ ಬರುವ ಜನರನ್ನು ಮಾತನಾಡಿಸುವ ಮಾಣಿ ಗೌಡ, ಮಟ್ಕಾ ಆಟಕ್ಕೆ ಹಣ ಹೂಡುವಂತೆ ಫುಸಲಾಯಿಸುತ್ತಿದ್ದರು. ಹೀಗೆ 1200ರೂಪಾಯಿಗಳನ್ನು ಅವರು ಸಂಗ್ರಹಿಸಿದ್ದರು. ಪಿಎಸ್‌ಐ ಜಯಶ್ರೀ ಪ್ರಭಾಕರ ಅಲ್ಲಿಯೂ ದಾಳಿ ನಡೆಸಿ ಹಣದ ಜೊತೆ ಮಟ್ಕಾ ಆಟಕ್ಕೆ ಬಳಸಿದ ಸಾಮಗ್ರಿಗಳನ್ನು ವಶಕ್ಕೆ ಪಡೆದರು.
ಈ ಮೂರು ಪ್ರಕರಣದಲ್ಲಿಯೂ ಮಟ್ಕಾ ಆಡಿಸುತ್ತಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.