ಕುಮಟಾ: ತಾಯಿ ಮಗ ಸಂಚರಿಸುತ್ತಿದ್ದ ಬೈಕು ಹೊಳೆಗದ್ದೆ ಟೋಲ್‌ಗೇಟಿನ ಬಳಿ ಎದುರಿಗಿದ್ದ ಲಾರಿಗೆ ಗುದ್ದಿದೆ. ಪರಿಣಾಮ ಬೈಕಿನಲ್ಲಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಮಟಾದ ಬಾಡ ಬಳಿಯ ಯೋಗೇಶ್ವರ ನಾಯ್ಕ (24) ಅವರು ಡಿ 12ರಂದು ತಮ್ಮ ತಾಯಿ ಮಮತಾ ನಾಯ್ಕ (50) ಅವರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೆದ್ದಾರಿ ಮೂಲಕ ಸಂಚರಿಸುತ್ತಿದ್ದರು. ಕುಮಟಾದಿಂದ ಹೊನ್ನಾವರ ಕಡೆ ಅವರು ಹೊರಟಿರುವಾಗ ಹೊಳಗದ್ದೆ ಟೋಲ್ ಬಳಿ ಮುಂದಿದ ಲಾರಿಗೆ ಅವರು ಬೈಕ್ ಗುದ್ದಿದರು.
ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ಮಮತಾ ನಾಯ್ಕ ಅವರು ನೆಲಕ್ಕೆ ಬಿದ್ದಿದ್ದು, ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡರು. ಶ್ರೀಧರ ನಾಯ್ಕ ಅವರು ಸಹ ಬೈಕಿನಿಂದ ಬಿದ್ದು ತಲೆ, ಮುಖಕ್ಕೆ ಗಾಯ ಮಾಡಿಕೊಂಡರು.
ಹೀರೆಗುತ್ತಿ ಎಣ್ಣೆಮಡಿಯ ಭಾಸ್ಕರ ಹಳ್ಳೆರ್ ಆ ಲಾರಿಯ ಕ್ಲಿನರ್ ಆಗಿದ್ದು, ಅವರಿಬ್ಬರಿಗೂ ಉಪಚರಿಸಿದರು. ನಂತರ ಅಪಘಾತದ ಬಗ್ಗೆ ಪೊಲೀಸ್ ದೂರು ನೀಡಿದರು.