ಕುಮಟಾ: ಸಮುದ್ರದ ಅಲೆಗಳಿಗೆ ಸಿಲುಕಿದ್ದ ಬಿಹಾರ ಮೂಲದ ಇಬ್ಬರನ್ನು ಜೀವ ರಕ್ಷಕ ಸಿಬ್ಬಂದಿ ಶುಕ್ರವಾರ ರಕ್ಷಿಸಿದ್ದಾರೆ.
ಬಿಹಾರದ ಪ್ರದೀಪ ಗುಪ್ತ (29) ಹಾಗೂ ಅರ್ಪಿತ್ ಬೆಹೆರಾ (30) ಈಜಾಡುವುದಕ್ಕಾಗಿ ಕುಡ್ಲೆ ಸಮುದ್ರಕ್ಕೆ ಇಳಿದಿದ್ದರು. ಅವರು ಅಪಾಯದ ಅಂಚಿಗೆ ಸಿಲುಕಿರುವುದನ್ನು ನೋಡಿದ ಜೀವರಕ್ಷ ಸಿಬ್ಬಂದಿ ನಾಗೇಂದ್ರ ಕುರ್ಲೆ ಹಾಗೂ ಮಂಜುನಾಥ ಹರಿಕಂತ್ರ ಕೂಡಲೇ ರಕ್ಷಣೆಗೆ ಧಾವಿಸಿದರು.
ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ಜೊತೆಗೂಡಿ ಅಪಾಯದಲ್ಲಿದ್ದ ಇಬ್ಬರನ್ನು ಅವರು ದಡಕ್ಕೆ ಕರೆ ತಂದರು. ಗುರುವಾರ ಸಹ ಇದೇ ಕಡಲತೀರದಲ್ಲಿ ಸುಳಿಗೆ ಸಿಲುಕಿದ್ದ ವಿದೇಶಿ ಮಹಿಳೆಯನ್ನು ಈ ತಂಡದವರು ರಕ್ಷಿಸಿದ್ದರು.