ಹೊನ್ನಾವರ: ಅರಣ್ಯವಾಸಿಗಳು ಹಾಗೂ ಅರಣ್ಯ ಅಧಿಕಾರಿಗಳ ನಡುವೆ ಸಾಮರಸ್ಯ ಕಾಪಾಡುವ ಉದ್ದೇಶದಿಂದ ಡಿ 21ರಂದು ಹೊನ್ನಾವರದಲ್ಲಿ `ಸ್ಪಂದನಾ’ ಕಾರ್ಯಕ್ರಮ ನಡೆಯಲಿದೆ.
ಅರಣ್ಯವಾಸಿಗಳ ಮತ್ತು ಅರಣ್ಯ ಸಿಬ್ಬಂದಿಗಳೊoದಿಗೆ ಜರಗುತ್ತಿರುವ ಕಾನೂನು ಅಂಶಗಳ ಗೊಂದಲಕ್ಕೆ ಪರಿಹಾರ ಮತ್ತು ಇಲಾಖೆಯೊಂದಿಗೆ ಸಾಮರಸ್ಯ ವೃದ್ಧಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಅರಣ್ಯ ಅತಿಕ್ರಮಣ ಹೋರಾಟಗಾರ ರವೀಂದ್ರ ನಾಯ್ಕ ಅವರು ಈ ಕುರಿತು ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ವಸಂತ ರೆಡ್ಡಿ ಅವರಿಗೆ ಪತ್ರ ಬರೆದಿದ್ದು, ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.



